Sunday, May 5, 2024
spot_imgspot_img
spot_imgspot_img

ಮಣಿಪುರ ಹಿಂಸಾಚಾರದ ವೇಳೆ ಕರ್ತವ್ಯ ನಿರ್ವಹಿಸಿದ್ದ ಯೋಧ ಅನಾರೋಗ್ಯದಿಂದ ನಿಧನ..!

- Advertisement -G L Acharya panikkar
- Advertisement -

ಕಳೆದ 31 ವರ್ಷಗಳಿಂದ ಸಿಆರ್‌ಪಿಎಫ್ ಯೋಧರಾಗಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲೆಯ ಯೋಧರೊಬ್ಬರು ಸಾವನ್ನಪಿರುವ ಘಟನೆ ಮಣಿಪುರದಲ್ಲಿ ನಡೆದಿದೆ.

ಜಿಲ್ಲೆಯ ಕೆ.ಆರ್.ಪುರಂನ ಪದ್ಮರಾಜು (52) ಮೃತ ಯೋಧ ಎಂದು ಗುರುತಿಸಲಾಗಿದೆ.

ಮೃತ ಯೋಧ ಪದ್ಮರಾಜು ಕಳೆದ 31 ವರ್ಷಗಳಿಂದ ಸಿಆರ್‌ಪಿಎಫ್‌ ಯೋಧರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಣಿಪುರದಲ್ಲಿ ನಡೆದ ಹಿಂಸಾಚಾರದ ವೇಳೆಯೂ ಅವರು ಕರ್ತವ್ಯ ನಿರ್ವಹಿಸಿದ್ದರು ಎಂದು ತಿಳಿದುಬಂದಿದೆ. ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಶುಕ್ರವಾರ ಮಣಿಪುರದಲ್ಲಿ ಮೃತಪಟ್ಟಿದ್ದಾರೆ.

ಕೆ.ಆರ್.ಪುರಂನ ಅವರ ನಿವಾಸಕ್ಕೆ ಪಾರ್ಥಿವ ಶರೀರ ತರಲಾಗಿದ್ದು, ನೂರಾರು ಮಂದಿ ಮೃತ ಯೋಧನ ಅಂತಿಮ ದರ್ಶನಕ್ಕೆ ಬರುತ್ತಿದ್ದಾರೆ. ಇಂದು (ಶನಿವಾರ) ಮಧ್ಯಾಹ್ನ ಹಾಸನ‌ ನಗರ ಹೊರವಲಯದ ಬಿಟ್ಟಗೋಡನಹಳ್ಳಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

- Advertisement -

Related news

error: Content is protected !!