Saturday, April 27, 2024
spot_imgspot_img
spot_imgspot_img

ನ್ಯೂ ಕಲ್ಲಾಳ ಹಾಲಕ್ಕಿ ಕಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ದಿಯಲ್ಲಿ ಶ್ರಮಿಕ ತರುಣರ ತಂಡ ಬೈರಂಪಳ್ಳಿಯ ಶ್ರಮ…..

- Advertisement -G L Acharya panikkar
- Advertisement -

ನಾವು ಜ್ಞಾನವನ್ನು ಪಡೆಯುವ ಸ್ಥಳವನ್ನು ಶಾಲೆ ಎಂದು ಕರೆಯಲಾಗುತ್ತದೆ. ಶಾಲೆಗೆ ದೇವಾಲಯದ ಸಾದೃಶ್ಯವನ್ನು ನೀಡಲಾಗಿದೆ. ನಮ್ಮ ಜೀವನದ ಪ್ರಮುಖ ಅನುಭವಗಳು ನಮ್ಮ ಬಾಲ್ಯ ಮತ್ತು ನಮ್ಮ ಬಾಲ್ಯದ ಶಾಲೆಯ ನೆನಪುಗಳಿಂದ ತುಂಬಿರುತ್ತದೆ. ಗುರುಗಳು ಮತ್ತು ಹಿರಿಯರನ್ನು ಗೌರವಿಸುವುದು ಒಂದು ಅಚಲ ನಂಬಿಕೆ. ನಾವು ನಮ್ಮ ಎಲ್ಲಾ ಶಾಲಾ ಶಿಕ್ಷಕರು ಮತ್ತು ಪೋಷಕರಿಗೆ ವಿಧೇಯನಾಗಿರಬೇಕು.

ಶಾಲಾ ಜೀವನದಲ್ಲಿ ಪ್ರತಿಯೊಬ್ಬರು ಬೆಳೆಸಿಕೊಂಡ ಉತ್ತಮ ಅಭ್ಯಾಸಗಳಲ್ಲಿ ಇದು ಕೂಡ ಒಂದು ಎನ್ನಬಹುದು. ಪ್ರತಿಯೊಬ್ಬರು ಕರ್ತವ್ಯ ನಿಷ್ಠೆ, ದೇಶ ಸೇವೆ, ಬಡವರಿಗೆ ಸಹಾಯ ಮಾಡುವುದು, ರೋಗಿಗಳಿಗೆ ಸಹಾಯ ಮಾಡುವುದು, ಹಸಿದವರಿಗೆ ಅನ್ನ ನೀಡುವುದು ಹೀಗೆ ಹಲವಾರು ಉತ್ತಮ ವಿಷಯಗಳನ್ನು ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುತ್ತದೆ. ಇಂಥ ಒಂದು ಶಾಲೆ ನಮ್ಮ ಬೈರಂಪಳ್ಳಿ ಗ್ರಾಮದ 41ನೇ ಶಿರೂರಿನ ಒಂದನೇ ವಾರ್ಡಿನಲ್ಲಿರುವ ನ್ಯೂ ಕಲ್ಲಾಳ ಹಾಲಕ್ಕಿ ಕಿರಿಯ ಪ್ರಾಥಮಿಕ ಶಾಲೆಯ ಕಥೆ. ಅದೆಷ್ಟೋ ವಿದ್ಯಾರ್ಥಿಗಳು ಕಲಿತು ಜೀವನದ ಹಾದಿಯಲ್ಲಿ ಯಶಸ್ಸು ಕಂಡು ಯಶೋಗಾಥೆಯನ್ನು ಬರೆದ ಇತಿಹಾಸವಿದೆ ಆದರೂ ಅದೆಷ್ಟು ವರ್ಷಗಳಿಂದ ಪಾಳುಬಿದ್ದು ಬಿಕೋ ಎನ್ನುತ್ತಿದ್ದ ಶಾಲೆಯ ಕಥೆ. ಶಾಲಾ ವೇದಿಕೆಯ ಮೇಲ್ಚಾವಣಿ ಹಾರಿ ಹೋಗಿ ಗ್ರಾಮಸ್ಥರು ದುರಸ್ತಿಗೆ ಪಂಚಾಯತ್ ನಲ್ಲಿ ಮನವಿ ಮಾಡಿದಾಗ ಅಲ್ಲಿನ ಒಬ್ಬ ಚುನಾಯಿತ ಪಂಚಾಯತ್ ಸದಸ್ಯ “ಇದು ಬಂದ್ ಆಗುವ ಶಾಲೆ ಇದಕ್ಕೆ ದುರಸ್ತಿ ಅವಶ್ಯಕತೆ ಏಕೆ?” ಎಂದು ಹೇಳಿದ ಕಥೆ.

ರಾಜಕೀಯ ಬಲವುಳ್ಳ ವ್ಯಕ್ತಿಗಳು ಸ್ವಾರ್ಥ ಸಾಧಿಸುವಾಗ ಶಾಲೆಯ ಪರವಾಗಿ ನಿಂತು ವಾದಿಸಿದ ಮುಖ್ಯೋಪಾಧ್ಯಾಯರಿಗೆ ಅವಮಾನಿಸಿ ಅವರ ತಂದೆ ತಾಯಿಯನ್ನು ಕೀಳು ಭಾಷೆಯಲ್ಲಿ ನಿಂದಿಸಿ, ಮಾನಸಿಕ ಖಿನ್ನತೆಗೆ ಒಳಪಡಿಸಿ ಅವರನ್ನು ಶೋಷಣೆ ಮಾಡಿದ ಶಾಲೆಯ ಕಥೆ. ಆದರೆ ಈ ಶಾಲೆಗೆ ಪುನರ್ಜನ್ಮ ಬಂದದ್ದು 2021 ರಲ್ಲಿ ಡಾ. ಸಂತೋಷ್ ಕುಮಾರ್ ಭೈರಂಪಳ್ಳಿಯವರು ಚುನಾಯಿತರಾಗಿ ವಾರ್ಡ್ ಸದಸ್ಯರಾದಾಗ, ಮತ್ತು ಶ್ರಮಿಕ ತರುಣ ತಂಡ ಸಂಘಟನೆ ಹುಟ್ಟಿಕೊಂಡಾಗ! ತನ್ನ ಸ್ವಾರ್ಥಕ್ಕಾಗಿ ರಾಜಕೀಯ ಪ್ರಬಲ ವ್ಯಕ್ತಿಗಳು ಅದೆಷ್ಟು ತೊಂದರೆ, ಬಲಪ್ರಯೋಗ ಮಾಡಿದರು ಕೂಡ ತನ್ನ ಹೋರಾಟದಿಂದ ಮುಂದೆ ನಿಂತು ಈ ಸರಕಾರಿ ಶಾಲೆಯನ್ನು ಉಳಿಸುವ, ಬೆಳೆಸುವ ಪ್ರಯತ್ನದೊಂದಿಗೆ ಸರಕಾರಿ ಅನುದಾನಗಳನ್ನು ತಂದು ಅದರೊಂದಿಗೆ ದಾನಿಗಳ ನೆರವನ್ನು ಬಳಸಿಕೊಂಡು ಎರಡು ವರ್ಷದಿಂದ ಶಾಲೆಗೆ ಸುಣ್ಣಬಣ್ಣ, ಪ್ರತಿ ಮಾಸಿಕ ಸಂಪೂರ್ಣ ಸ್ವಚ್ಛತೆ, ನೂತನ ಶೌಚಾಲಯದ ನಿರ್ಮಾಣ, ಶೇಖರಣ ಕೊಠಡಿಯ ನಿರ್ಮಾಣ, ಸಂಪೂರ್ಣ ಶಾಲೆಗೆ ಟೈಲ್ಸ್ ಅಳವಡಿಕೆ, ಸ್ವಚ್ಛ ಕುಡಿಯುವ ನೀರಿನ ಪೂರೈಕೆ, ಪ್ರತಿವರ್ಷ ಶಾಲೆಯಲ್ಲಿ ಗಣಹೋಮ, ಸತ್ಯನಾರಾಯಣ ಪೂಜೆ ಜೊತೆಗೆ ಮಕ್ಕಳ ಪೋಷಕರೊಂದಿಗೆ ನಿಕಟ ಸಂಪರ್ಕ, ಶಾಲಾ ಮಕ್ಕಳಿಗೆ ಪ್ರತಿ ವರ್ಷ ಸಂಪೂರ್ಣ ವರ್ಷಕ್ಕೆ ಬೇಕಾಗುವ ಪಠ್ಯ ಪುಸ್ತಕ, ಬ್ಯಾಗು ನೀರಿನ ಬಾಟಲಿ ಛತ್ರಿ ಮತ್ತು ಇತರ ವಸ್ತುಗಳ ಪೂರೈಕೆ, ಶಾಲಾ ಮಕ್ಕಳನ್ನು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಪ್ರಯಾಣದ ವ್ಯವಸ್ಥೆ ಇವೆಲ್ಲ ತನ್ನ ವೈಯಕ್ತಿಕ ಆಸಕ್ತಿಯೊಂದಿಗೆ ಸೇವಾ ಕಾರ್ಯ ಮಾಡುತ್ತಾ ತನ್ನ ಶ್ರಮದೊಂದಿಗೆ ಅನುದಾನಗಳನ್ನು ತಂದು ಈಗ ನಮ್ಮ ಶಾಲೆಯನ್ನು ಶ್ರೀಯುತರು ಇನ್ನಷ್ಟು ಮೆರಗು ತರುವ ರೀತಿಯಲ್ಲಿ ಅಭಿವೃದ್ಧಿಗೊಳಿಸುತ್ತಿದ್ದಾರೆ ಈಗ ಶಾಲೆಯಲ್ಲಿ ನೂತನ ಶಿಕ್ಷಕರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡಿ ಆಕರ್ಷಣೀಯವಾದ ಭಾರತೀಯ ರೈಲು ಮಾದರಿಯ ವಿನ್ಯಾಸವುಳ್ಳ ಪೈಂಟಿಂಗ್ ಮಾಡಿ ವಿದ್ಯಾರ್ಥಿಗಳಿಗೆ ಹೊಸ ಆಸಕ್ತಿ, ಕಲಿಯುವಿಕೆಗೆ ಹೊಸ ಹುಮ್ಮಸ್ಸನ್ನು, ನೋಡುಗರ ಕಣ್ಣಿಗೆ ಮೆರುಗನ್ನು ನೀಡಿರುತ್ತಾರೆ ಇದನ್ನು ವೀಕ್ಷಿಸುತ್ತಿರುವ ಗ್ರಾಮಸ್ಥರು ಹೊಗಳಿಕೆಯ, ಪ್ರಶಂಸೆಯ ಸರಮಾಲೆಯನ್ನು ಕಟ್ಟುತ್ತಿದ್ದಾರೆ.

ಇಂತಹ ಪಂಚಾಯತ್ ಸದಸ್ಯರು ಪ್ರತಿ ಗ್ರಾಮಗಳಲ್ಲಿ ಇದ್ದರೆ ಆ ವಾರ್ಡ್ ಪರಿಸರ, ಆ ಗ್ರಾಮ ಮತ್ತು ಸರಕಾರಿ ಶಾಲಾ ಶಿಕ್ಷಣದ ಪದ್ಧತಿಯ ಅಭಿವೃದ್ಧಿ ಖಂಡಿತವಾಗಿಯೂ ಉತ್ತುಂಗದಲ್ಲಿರುತ್ತದೆ. ಅದೆಷ್ಟೋ ದುಷ್ಟ ಶಕ್ತಿಗಳು, ದುಷ್ಟರು ರಾಜಕೀಯ ಬಲಪ್ರಯೋಗ ಮಾಡಿದರು ಕೂಡ ಬಗ್ಗದೇ ಜಗ್ಗದೆ ಸದಾ ಎದುರಿಸುತ್ತ ಮುಂದೆ ಸಾಗುತ್ತಿರುವ ನಮ್ಮ ಗ್ರಾಮ ಪಂಚಾಯತ್ ಸದಸ್ಯ ಶ್ರೀ ಸಂತೋಷ್ ಕುಮಾರ್ ಬೈರಂಪಳ್ಳಿಯವರಿಗೆ ಗ್ರಾಮಸ್ಥರು ಸದಾ ಚಿರಋಣಿ.

ನಮ್ಮ ಈ ತಂಡ ನಿಮ್ಮೊಂದಿಗೆ ಸದಾ ಭಾಗಿಯಾಗಿರುತ್ತದೆ ಮತ್ತು ಆ ದೇವರು ಇನ್ನಷ್ಟು ಅನುಗ್ರಹ ಮಾಡಿ ಉನ್ನತ ಸ್ಥಾನದಲ್ಲಿ ನಿಮ್ಮನ್ನು ಸಿಂಗರಿಸಲಿ ಎಂದು ಹಾರೈಸುತ್ತೇವೆ.

ಶ್ರಮಿಕ ತರುಣರ ತಂಡ ಬೈರಂಪಳ್ಳಿ

ಪರಿಶ್ರಮ ಸೇವೆ ನಮ್ಮದು

ಆಶೀರ್ವಾದ_ನಿಮ್ಮದು

ಸಂತೋಷ್ ಕುಮಾರ್ ಬೈರಂಪಳ್ಳಿ
ಅಭಿಮಾನಿ ಬಳಗ ಉಡುಪಿ ಜಿಲ್ಲೆ

- Advertisement -

Related news

error: Content is protected !!