Sunday, June 21, 2026
spot_imgspot_img
spot_imgspot_img

ಹಿತ್ತಲಿನಲ್ಲಿ ಏಲಿಯನ್‌ಗಳನ್ನು ಕಂಡೆ..! ಕೂಡಲೇ ಗಾಢಬೆಳಕಿನೊಂದಿಗೆ ಹಾರಿ ಹೋದವು ಎಂದು ಪೊಲೀಸರಿಗೆ ಮಾಹಿತಿ ನೀಡಿದ ಯುವಕ

- Advertisement -
- Advertisement -

ತನ್ನ ಮನೆಯ ಹಿತ್ತಲಿನಲ್ಲಿ ಏಲಿಯನ್‌ಗಳನ್ನು ನೋಡಿರುವುದಾಗಿ ಯುವಕನೊಬ್ಬ ಅಮೆರಿಕದ ಲಾಸ್ ವೇಗಾಸ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಲಾಸ್ ವೇಗಾಸ್ ಪೊಲೀಸರೊಬ್ಬರ ಬಾಡಿ ಕ್ಯಾಮ್‌ನಲ್ಲಿ ಯುಎಫ್‌ಒ ಒಂದು ಹಾರಿಹೋಗುವ (Unidentified flying object) ವಿಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

‘ಆ ವಿಡಿಯೊ ಮುದ್ರಿತವಾದ ದಿನ ತನ್ನ ಮನೆಯ ಹಿತ್ತಲಿನಲ್ಲಿ 8 ರಿಂದ 10 ಅಡಿ ಎತ್ತರದ ದೊಡ್ಡ ಕಣ್ಣು, ಕೈ ಕಾಲು ಹೊಂದಿದ್ದ ಎರಡು ಜೀವಿಗಳು ನಿಂತಿದ್ದನ್ನು ನಾನು ನೋಡಿದೆ. ಅವು ಏಲಿಯನ್ ರೀತಿ ಕಂಡವು. ಕೂಡಲೇ ಗಾಢಬೆಳಕಿನೊಂದಿಗೆ ಹಾರಿ ಹೋದವು’ ಎಂದು ಪೊಲೀಸರ ಎದುರು ಮಾಹಿತಿ ನೀಡಿದ್ದಾನೆ.

ಏಪ್ರಿಲ್ 30 ರಂದು ಆ ವಿಡಿಯೊ ಮುದ್ರಿತವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿಯನ್ನು ಹಂಚಿಕೊಂಡ ವ್ಯಕ್ತಿಯ ಹೆಸರು, ವಿಳಾಸವನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಈ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ‘ಮಿರರ್’ ವೆಬ್‌ಸೈಟ್ ವರದಿ ಮಾಡಿದೆ.

- Advertisement -

Related news

error: Content is protected !!