Friday, May 17, 2024
spot_imgspot_img
spot_imgspot_img

ಟಿಪ್ಪರ್ ಲಾರಿ ಮತ್ತು ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ; ಇಬ್ಬರಿಗೆ ಗಾಯ..!

- Advertisement -G L Acharya panikkar
- Advertisement -

ಹಿಂದಿನಿಂದ ಹೊಡೆದ ಟಿಪ್ಪರ್ ಲಾರಿ ರಭಸಕ್ಕೆ ಬೋರ್ ವೆಲ್ ಮೋಟಾರ್ ಎತ್ತುವ ಟ್ರ್ಯಾಕ್ಟರ್ ಮೇಲಿನ ಟವರ್ ಸಮೇತ ಪೀಸ್ ಪೀಸ್ ಆಗಿ ನೆಲಕ್ಕುರುಳಿ ಇಬ್ಬರಿಗೆ ತೀವ್ರವಾಗಿ ಗಾಯಗಳಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44 ರ ವಾಪಸಂದ್ರ ಬೈಪಾಸ್ ರಸ್ತೆ ಬ್ರಿಡ್ಜ್ ಮೇಲೆ ನಡೆದಿದೆ.

ಗಾಯಾಳುಗಳನ್ನು ಬೆಂಗಳೂರು ನಿಮಾನ್ಸ್ ಮತ್ತು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು. ಗಾಯಾಳುಗಳಾದ ದಿಲೀಪ್ ಮತ್ತು ರಾಘವೇಂದ್ರ ಆವತಿ ಬಳಿ ಗೊಬ್ಬರಗುಂಟೆ ನಿವಾಸಿಗಳೆಂದು ಪತ್ತೆ ಹಚ್ಚಲಾಗಿದೆ. ಟಿಪ್ಪರ್ ಹೊಡೆದ ರಬಸಕ್ಕೆ ಟ್ರಾಕ್ಟರ್ ಮೇಲಿದ್ದ ಟವರ್ ಸಮೇತ ಉರುಳಿ ಬಿದ್ದಿದೆ.

ಆವತಿಯಿಂದ ಚಿಕ್ಕಬಳ್ಳಾಪುರ ಹಾರೋಬಂಡೆ ಕಡೆ ಹೊರಟಿದ್ದ ಟ್ರಾಕ್ಟರ್ ಗೆ ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಟ್ರ್ಯಾಕ್ಟರ್ ಗೆ ಹೊಡೆದಿದ್ದು, ಘಟನೆಯಲ್ಲಿ ಟಿಪ್ಪರ್ ಲಾರಿ ಮುಂಭಾಗದ ಗಾಜುಗಳು ಪುಡಿಪುಡಿಯಾಗಿವೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!