Sunday, May 5, 2024
spot_imgspot_img
spot_imgspot_img

ಡೆಂಗ್ಯೂ ಜ್ವರಕ್ಕೆ ಮೂರು ವರ್ಷದ ಬಲಿ; ಅಧಿಕಾರಿಗಳ ನಿರ್ಲಕ್ಷ್ಯವೇ ಸಾವಿಗೆ ಕಾರಣ- ಗ್ರಾಮಸ್ಥರ ಆಕ್ರೋಶ

- Advertisement -G L Acharya panikkar
- Advertisement -

ಡೆಂಗ್ಯೂ ಜ್ವರದಿಂದ ಮೂರು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಜಿಲ್ಲೆ ಅರಸೀಕೆರೆ ‌ತಾಲೂಕು ಬಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಕಾಳನಕೊಪ್ಪಲು ಗ್ರಾಮದ ಚರಣ್ (3) ಮೃತ ಬಾಲಕ. ಈತನ ಪೋಷಕರು ಚಿಕ್ಕಮಗಳೂರಿನಲ್ಲಿ ನೆಲೆಸಿದ್ದಾರೆ. ಊರಿಗೆ ಬಂದು ಚಿಕ್ಕಮಗಳೂರಿಗೆ ಹೋದ ಬಳಿಕ ಬಾಲಕನಿಗೆ ಜ್ವರ ಬಂದಿದೆ. ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಹಾಸನದ ಹಿಮ್ಸ್‌ಗೆ ಪೋಷಕರು ದಾಖಲಿಸಿದ್ದರು. ಜ್ವರ ತೀವ್ರಗೊಂಡಿದ್ದರಿಂದ ಬೆಂಗಳೂರಿಗೆ ಕರೆದೊಯ್ಯುವ ವೇಳೆ ಮಗು ಮೃತಪಟ್ಟಿದೆ.

ಗ್ರಾಮದಲ್ಲಿ ಹಲವರು ಜ್ವರದಿಂದ ಬಳಲುತ್ತಿದ್ದು, ಹತ್ತಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ತಿಂಗಳಿಗೂ ಮುನ್ನವೇ ಕ್ರಮ ವಹಿಸುವಂತೆ ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಪಿಡಿಒ ಜತೆಗೆ ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿಗೂ ಗ್ರಾಮಸ್ಥರು ಮನವಿ ಪತ್ರ ಬರೆದಿದ್ದರು. ಮಗು ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ಹೊರಹಾಕಿರುವ ಗ್ರಾಮಸ್ಥರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಮದಲ್ಲಿ ರೋಗ ನಿಯಂತ್ರಣಕ್ಕೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

- Advertisement -

Related news

error: Content is protected !!