Sunday, April 28, 2024
spot_imgspot_img
spot_imgspot_img

ವಿಟ್ಲ: ಗೋಫಾರ್ಮ್ ಕಟ್ಟಡಕ್ಕೆ ಕಾನೂನು ಬದ್ಧ ಪರವಾನಿಗೆಯನ್ನು ನೀಡಲಾಗಿದ್ದು, ಇದನ್ನು ರದ್ದುಗೊಳಿಸಲು ಅವಕಾಶ ಇಲ್ಲ- ಗ್ರಾ.ಪಂ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು

- Advertisement -G L Acharya panikkar
- Advertisement -
vtv vitla

ವಿಟ್ಲ: ಪುಣಚ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೊಲ್ಲಪದವು ಕೊಡಂಚಡ್ಕ ಎಂಬಲ್ಲಿ ನಿರ್ಮಾಣವಾಗುತ್ತಿರುವ ಗೋಫಾರ್ಮ್ ಕಟ್ಟಡಕ್ಕೆ ಪುಣಚ ಗ್ರಾಮ ಪಂಚಾಯತ್ ಕಾನೂನು ಬದ್ಧ ಪರವಾನಿಗೆಯನ್ನು ನೀಡಲಾಗಿದ್ದು, ಇದನ್ನು ರದ್ದುಗೊಳಿಸಲು ಅವಕಾಶ ಇಲ್ಲ ಎಂದು ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು ತಿಳಿಸಿದ್ದಾರೆ.

ಅವರು ವಿಟ್ಲ ಪ್ರಸ್ ಕ್ಲಬ್ ನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಪರವಾನಿಗೆ ನೀಡಿದ ವಿಚಾರವನ್ನು ಸಮರ್ಥಿಸಿಕೊಂಡರು. ಇದು ಹಸೈನಾರ್ ಮಾದುಮೂಲೆ ಎಂಬವರಿಗೆ ಸೇರಿದ ಖಾಸಗಿ ಸ್ಥಳವಾಗಿದ್ದು, ಎಲ್ಲವೂ ಕಂದಾಯ ಇಲಾಖೆ ಕಾನೂನು ಪ್ರಕಾರವೇ ಇದೆ. ಗೋಫಾರ್ಮ್ ಕಟ್ಟಡ ನಿರ್ಮಾಣ ವನ್ನು ತಡೆಯಲು ಗ್ರಾಮ ಪಂಚಾಯತ್‌ ಅಧಿಕಾರ ಹೊಂದಿಲ್ಲ.ಗ್ರಾಮಸ್ಥರು ಸತ್ಯ ವಿಚಾರವನ್ನು ಮನದಟ್ಟು ಮಾಡಿಕೊಳ್ಳಬೇಕೆಂದು ಪತ್ರಿಕಾಗೋಷ್ಠಿಯ ಮೂಲಕ ಪ್ರಸ್ತಾಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪುಣಚ ಗ್ರಾಮ ಪಂಚಾಯತ್ ಸದಸ್ಯರಾದ ಉದಯ ಕುಮಾರ್ ದಂಬ, ಹರೀಶ್ ಮಾರಮಜಲು, ತೀರ್ಥರಾಮ ನಾಯಕ್‌ ಆಜೇರು ಉಪಸ್ಥಿತರಿದ್ದರು.

- Advertisement -

Related news

error: Content is protected !!