Friday, May 17, 2024
spot_imgspot_img
spot_imgspot_img

ಮದುವೆಯಾದ ತಿಂಗಳಿಗೆ ಪ್ರಿಯಕರನೊಡನೆ ಓಡಿಹೋದ ಪತ್ನಿ; ಪ್ರಿಯಕರನೊಂದಿಗೆ ಪತ್ನಿಯನ್ನೇ ಕೊಲೆಗೈದ ಪತಿರಾಯ…!

- Advertisement -G L Acharya panikkar
- Advertisement -

ಮದುವೆಯಾದ ಒಂದು ತಿಂಗಳಿಗೇ ಪ್ರಿಯಕರನೊಡನೆ ಓಡಿ ಹೋದ ಪತ್ನಿಯನ್ನು ಅವಳ ಸಂಗಾತಿಯೊಡನೇ ಪತಿ ಕೊಚ್ಚಿ ಕೊಲೆಗೈದಿರುವ ಘಟನೆ ಅಥಣಿಯ ಕೋಕಟನೂರ ಗ್ರಾಮದ ಐಗಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.

ಯಾಸಿನ್‌ ಬಾಗೊಡೆ (21) ಮತ್ತು ಹೀನಾ ಕೌಸರ್‌ ಸುದಾರಾಣೆ (19) ಮೃತ ಜೋಡಿಗಳಾಗಿದ್ದು, ಕೊಲೆ ಆರೋಪಿ ತೌಫಿಕ್‌ ಕ್ಯಾಡಿ ತಲೆ ಮರೆಸಿಕೊಂಡಿದ್ದಾನೆ. ಕೊಲೆ ಮಾಡುವ ವೇಳೆ ತಡೆಯಲು ಬಂದ ಅಮಿನಾಬಾಯಿ ಬಾಗೂಡ ಹಾಗೂ ಮುಸ್ತಫಾ ಮುಲ್ಲಾ ಎಂಬವರ ಮೇಲೂ ಹಲ್ಲೆ ನಡೆಸಲಾಗಿದ್ದು, ಇಬ್ಬರೂ ಮೀರಜ್‌ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

4 ತಿಂಗಳ ಹಿಂದಷ್ಟೇ ತೌಫಿಕ್‌ ಕ್ಯಾಡಿ ಮತ್ತು ಹೀನಾ ಕೌಸರ್‌ ನಡುವೆ ಮದುವೆ ನಡೆದಿತ್ತು. ಮದುವೆಯಾದ ಒಂದು ತಿಂಗಳಿಗೇ ಹೀನ ಕೌಸರ್‌ ತನ್ನ ಪ್ರಿಯಕರ ಯಾಸಿನ್‌ ಜೊತೆ ಓಡಿ ಹೋಗಿದ್ದಳು. ಈ ಬಗ್ಗೆ ವಿಚಾರಣೆ ನಡೆಸಿದ ಪಂಚಾಯಿತಿ ಪ್ರಮುಖರು ಇವರಿಬ್ಬರ ವಿವಾಹ ಮುರಿದು, ಪ್ರಿಯಕರನೊಡನೆಯೇ ವಿವಾಹ ಮಾಡಿಸಿದ್ದರು. ಇದಿರಂದ ಕುಪಿತಗೊಂಡಿದ್ದ ತೌಫಿಕ್‌ ಹೀನಾಕೌಸರ್‌ ಮನೆಗೆ ತೆರಳಿ ಹತ್ಯೆ ನಡೆಸಿದ್ದಾನೆ. ಐಗಳಿ ಪೊಲೀಸ್‌ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

- Advertisement -

Related news

error: Content is protected !!