Thursday, May 9, 2024
spot_imgspot_img
spot_imgspot_img

ಚಾರ್ಜ್‌‌ಗೆ ಇಟ್ಟ ಮೊಬೈಲ್‌ ಸ್ಫೋಟಗೊಂಡು ಮಹಿಳೆ ಮೃತ್ಯು..!!

- Advertisement -G L Acharya panikkar
- Advertisement -

ಚಾರ್ಜ್‌ಗೆ ಇಟ್ಟ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ವೇಳೆ ಮೊಬೈಲ್‌ ಸ್ಫೋಟಗೊಂಡು ಮಹಿಳೆಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ತಂಜಾವೂರಿನ ಕುಂಭಕೋಣಂನಲ್ಲಿ ನಡೆದಿದೆ.

ಮೊಬೈಲ್ ಫೋನ್ ಮತ್ತು ವಾಚ್ ರಿಪೇರಿ ಅಂಗಡಿ ನಡೆಸುತ್ತಿದ್ದ ಕೋಕಿಲಾ (33) ಮೃತಪಟ್ಟ ಮಹಿಳೆ. ರಾಜಪುರಂ ಗ್ರಾಮದ ಕೋಕಿಲಾ ಪತಿಯ ಮರಣದ ನಂತರ ಮೊಬೈಲ್ ಸರ್ವೀಸ್ ಮತ್ತು ವಾಚ್ ರಿಪೇರಿ ಅಂಗಡಿ ನಡೆಸುತ್ತಿದ್ದರು. ಚಾರ್ಜಿಂಗ್ ಫೋನ್ ನಲ್ಲಿ ಮಾತನಾಡುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.

ವರದಿಗಳ ಪ್ರಕಾರ, ಸ್ಫೋಟದಲ್ಲಿ ಅಂಗಡಿಗೆ ಬೆಂಕಿ ಹೊತ್ತಿಕೊಂಡಿದೆ ಮತ್ತು ಕೋಕಿಲಾ ಕೂಡ ತೀವ್ರ ಸುಟ್ಟಗಾಯಗೊಂಡಿದ್ದರು. ಬೆಂಕಿ ನಂದಿಸಲು ಧಾವಿಸಿದ ಸ್ಥಳೀಯರು ಕೋಕಿಲಾಳನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

- Advertisement -

Related news

error: Content is protected !!