Thursday, June 4, 2026
spot_imgspot_img
spot_imgspot_img

ಪುತ್ತೂರು: ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರನ್ನು ಹಿಂದಕ್ಕೆ ಪಡೆಯುವಂತೆ ಮಹಿಳೆಯೋರ್ವರಿಗೆ ಬೆದರಿಕೆ , ಹಲ್ಲೆ

- Advertisement -
- Advertisement -

ಪುತ್ತೂರು: ಪವರ್ ಟಿ ವಿ ಯ ರಾಕೇಶ್ ಶೆಟ್ಟಿ ಮತ್ತು ಪ್ರಶಾಂತ್ ಎಂಬವರ ವಿರುದ್ದ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರನ್ನು ಹಿಂದಕ್ಕೆ ಪಡೆಯುವಂತೆ ಮಹಿಳೆಯೋರ್ವರಿಗೆ ಬೆದರಿಕೆ ಹಾಕಿ, ಹಲ್ಲೆ ನಡೆಸಿದ ಘಟನೆ ಪುತ್ತೂರಿನ ಕೊಳ್ತಿಗೆ ಗ್ರಾಮದಲ್ಲಿ ನಡೆದಿದೆ.

ಕೊಳ್ತಿಗೆ ಗ್ರಾಮ, ಪುತ್ತೂರು‌ ನಿವಾಸಿಯಾದ ಚಿತ್ರಪ್ರಭಾ ರೈ (40) ಎಂಬವರು ದಿನಾಂಕ 06-01-24 ರಂದು ಮಧ್ಯಾಹ್ನ ಸಮಯ ತನ್ನ ಮನೆಯಲ್ಲಿದ್ದಾಗ, ಆರೋಪಿಗಳಾದ ಪ್ರಶಾಂತ ಬಾಗೇಪಲ್ಲಿ ಪವರ್ ಟಿ ವಿ, ಭಾಸ್ಕರ ಧರ್ಮಸ್ಥಳ, )ಪ್ರದೀಪ್ ಶೆಟ್ಟಿ ಹಾಗೂ ಸಹಚರರು ಚಿತ್ರಪ್ರಭಾ ರೈಯವರ ಮನೆಗೆ ಬಂದು, ಪವರ್ ಟಿ ವಿ ಯ ರಾಕೇಶ್ ಶೆಟ್ಟಿ ಮತ್ತು ಪ್ರಶಾಂತ್ ಎಂಬವರ ವಿರುದ್ದ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರನ್ನು ಹಿಂದಕ್ಕೆ ಪಡೆಯಬೇಕು ಹಾಗೂ 5 ಲಕ್ಷ ಹಣ ನೀಡಬೇಕು, ಇಲ್ಲದಿದ್ದರೆ ಚಿತ್ರಪ್ರಭಾ ರೈ ಮತ್ತು ಅವರ ಕುಟುಂಬದವರನ್ನು ಬೆಂಕಿ ಹಾಕಿ ಪೆಟ್ರೋಲ್ ಸುರಿಯುವುದಾಗಿ ಬೆದರಿಕೆ ಹಾಕಿರುತ್ತಾರೆ. ನಂತರ ಹಲ್ಲೆ ನಡೆಸಲು ಯತ್ನಿಸಿ ಮನೆಯ ಮೇಲೆ ದಾಳಿ ನಡೆಸಿ, ಕಲ್ಲು ತೂರಾಟ ನಡೆಸಿದ್ದಾರೆ. ಪ್ರಕರಣದ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ:05/2024 ಕಲಂ: 120(B),447,506 ಜೊತೆಗೆ 34 IPC ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!