Thursday, May 16, 2024
spot_imgspot_img
spot_imgspot_img

ವಿದ್ಯುತ್ ತಂತಿಗೆ ಏಣಿ ತಗುಲಿ ಯುವಕ ಮೃತ್ಯು..!

- Advertisement -G L Acharya panikkar
- Advertisement -

ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿ ಯುವಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಟ್ಟಣಗೆರೆ ಗ್ರಾಮದಲ್ಲಿ ನಡೆದಿದೆ.

ಮೃತನನ್ನು 27 ವರ್ಷದ ಅಭಿಷೇಕ್ ಎಂದು ಗುರುತಿಸಲಾಗಿದೆ. ಮೃತ ಅಭಿಷೇಕ್ ಮೂರು ಎಕರೆ ಅಡಿಕೆ ತೋಟವಿತ್ತು. ತೋಟದಲ್ಲಿ ತೆಂಗಿನ ಮರಗಳು ಕೂಡ ಇದ್ದವು. ಭಾನುವಾರ ಸಂಜೆ ತೋಟದಲ್ಲಿ ತೆಂಗಿನಕಾಯಿ ಕೀಳಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ತೋಟದಲ್ಲಿ ಒಂದು ಮರದಿಂದ ಮತ್ತೊಂದು ತೆಂಗಿನ ಮರದ ಬಳಿ ಹೋಗುವಾಗ ಅಲ್ಯುಮಿನಿಯಂ ಏಣಿಯನ್ನು ಎತ್ತಿಕೊಂಡು ಹೋಗುವಾಗ ಪ್ರೈಮರಿ ಲೈನ್ (11 ಸಾವಿರ ಕಿಲೋ ವ್ಯಾಟ್) ವಿದ್ಯುತ್ ತಂತಿಗೆ ಏಣಿ ತಗುಲಿ ಸಾವನ್ನಪ್ಪಿದ್ದಾನೆ.

ವಿದ್ಯುತ್ ಶಾಕ್ ನಿಂದ ತೋಟದಲ್ಲೇ ಬಿದ್ದಿದ್ದ ಅಭಿಷೇಕ್‌ನನ್ನು ಕೂಡಲೇ ಕಡೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಅಸುನೀಗಿದ್ದಾನೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!