Monday, June 8, 2026
spot_imgspot_img
spot_imgspot_img

ತಿಪಟೂರಿನ ಯುವಕ ಕುಂದಾಪುರದಲ್ಲಿ ಸಮುದ್ರಪಾಲು, ಮತ್ತೋರ್ವನ ರಕ್ಷಣೆ..!

- Advertisement -
- Advertisement -

ಕುಂದಾಪುರ: ತಿಪಟೂರಿನಿಂದ ಕುಂದಾಪುರಕ್ಕೆ ಸಂಬಂಧಿಕರ ಮನೆಯ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿಗಳು ಬುಧವಾರ ಸಂಜೆ ಸಮುದ್ರಕ್ಕಿಳಿದಿದ್ದು ಒಬ್ಬ ನಾಪತ್ತೆಯಾಗಿದ್ದು, ಇನ್ನೊಬ್ಬನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಸಮುದ್ರದಲ್ಲಿ ಕೊಚ್ಚಿಹೋಗಿ ನಾಪತ್ತೆಯಾದ ವಿದ್ಯಾರ್ಥಿ ತಿಪಟೂರಿನ ನಿವಾಸಿ ಯೋಗೋಶ್ (23) ಹಾಗೂ ರಕ್ಷಿಸಲ್ಪಟ್ಟವ ಯೋಗೀಶನ ಸ್ನೇಹಿತ ಸಂದೀಪ್ ಎಂದು ಗುರುತಿಸಲಾಗಿದೆ.

ಕುಂದಾಪುರದ ಸಂಬಂಧಿಕರ ಮನೆಗೆ ಮದುವೆ ಕಾರ್ಯಕ್ರಮಕ್ಕೆಂದು ಯೋಗೀಶ್ ಹಾಗೂ ಸಂದೀಪ್ ಬಂದಿದ್ದರು. ಬುಧವಾರ ಸಂಜೆ ಬೀಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾರಸ್ ಮನೆ ಸಮೀಪದ ಕಡಲತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ನೀರಿನ ಅಲೆಗಳನ್ನು ಕಂಡ ಯುವಕರು ಸಮುದ್ರಕ್ಕೆ ಇಳಿದಿದ್ದಾರೆ.

ಈ ಸಂದರ್ಭ ಅಲೆಗಳ ಹೊಡೆತಕ್ಕೆ ಯೋಗೀಶ್ ಕೊಚ್ಚಿ ಹೋಗುತ್ತಿದ್ದ ಸಂದರ್ಭ ಸಂದೀಪ ಕಾಪಾಡಲು ಹೋದರು ಕೂಡ ತೀವ್ರ ತರಹದ ಅಲೆಗಳ ಆರ್ಭಟ ಇದ್ದಿದ್ದರಿಂದ ಏನೂ ಮಾಡಲು ಸಾಧ್ಯವಾಗದೇ ಬೊಬ್ಬೆ ಹಾಕಿದ್ದಾನೆ. ಯುವಕನ ಬೊಬ್ಬೆ ಕೇಳಿದ ತಕ್ಷಣ ಓಡಿ ಬಂದ ಸ್ಥಳೀಯರು ಸಂದೀಪನನ್ನು ರಕ್ಷಿಸಿದ್ದಾರೆ‌. ಆದರೆ ಯೋಗೀಶ ಅಷ್ಟೊತ್ತಿಗಾಗಲೇ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಕುಂದಾಪುರ ಪೊಲೀಸರು ಮತ್ತು ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಯುವಕನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಇಬ್ಬರು ತಿಪಟೂರಿನಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!