Sunday, June 14, 2026
spot_imgspot_img
spot_imgspot_img

ಕಾಸರಗೋಡು: ರೈಲಿನಿಂದ ಬಿದ್ದು ಯುವತಿ ಮೃತ್ಯು…!

- Advertisement -
- Advertisement -

ಕಾಸರಗೋಡು: ರೈಲಿನಿಂದ ಬಿದ್ದು ಯುವತಿಯೊರ್ವರು ಮೃತಪಟ್ಟ ಘಟನೆ ಪಳ್ಳಿಕೆರೆಯಲ್ಲಿ ನಡೆದಿದೆ. ಕಲ್ಪಟ್ಟ ಕಾವುಮಂದದ ಐಶ್ವರ್ಯ ಜೋಸೆಫ್ (30) ಮೃತಪಟ್ಟವರು.

ಪಳ್ಳಿಕೆರೆ ಮಾಸ್ತಿ ಗುಡ್ಡೆಯ ರೈಲ್ವೆ ಹಳಿ ಸಮೀಪ ಮೃತ ದೇಹಪತ್ತೆಯಾಗಿದೆ. ರಾತ್ರಿ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಬೆಳಿಗ್ಗೆ ಪರಿಸರವಾಸಿಗಳು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು.

ಮೃತ ದೇಹದ ಬಳಿ ಲಭಿಸಿದ ಪರ್ಸ್‌ನಲ್ಲಿದ್ದ ಗುರುತು ಚೀಟಿಯಿಂದ ಯುವತಿಯ ಗುರುತು ಪತ್ತೆ ಹಚ್ಚಲಾಯಿತು. ಯುವತಿಯು ಕೋಜಿಕ್ಕೊಡ್ ನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಳು. ಉದ್ಯೋಗದ ನಿಮಿತ್ತ ನೇತ್ರಾವತಿ ರೈಲಿನಲ್ಲಿ ಮಂಗಳೂರಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈ ಘಟನೆ ಬಗ್ಗೆ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ.

- Advertisement -

Related news

error: Content is protected !!