Friday, May 17, 2024
spot_imgspot_img
spot_imgspot_img

ಬೆಳ್ತಂಗಡಿ : ಟೆಲಿಗ್ರಾಮ್ ಆಪ್ ಮೂಲಕ ಆನ್ ಲೈನ್‌ನಲ್ಲಿ 6 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಯುವತಿ

- Advertisement -G L Acharya panikkar
- Advertisement -

ಬೆಳ್ತಂಗಡಿ : ಟೆಲಿಗ್ರಾಮ್ ಆಪ್ ಮೂಲಕ ಆನ್ ಲೈನ್‌ನಲ್ಲಿ ಯುವತಿಯೊಬ್ಬರು 6 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಘಟನೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಾಲೂಕಿನ ಕುವೆಟ್ಟು ಗ್ರಾಮದ ನಿವಾಸಿ ನುಪೈಲಾ ಕೆ ಐ (26) ವಂಚನೆಗೊಳಗಾದವರು

ನುಪೈಲಾ ಅವರಿಗೆ ಫೆಬ್ರವರಿ 6 ರಂದು ಟೆಲಿಗ್ರಾಮ್ ಆಪ್ ಮೂಲಕ, ಡಾಟ ರೇಡ್ ಎಂಬ ಕಂಪೆನಿಯಿಂದ ಬಂದ ಲಿಂಕ್ ಮೂಲಕ ಆನ್ ಲೈನ್ ಪ್ರೊಡಕ್ಟ್ ಗೆ ರೇಟಿಂಗ್ ಮಾಡುವ ಕೆಲಸ ನಿರ್ವಹಿಸಿದ್ದು, ಈ ವೇಳೆ 900/- ರೂಪಾಯಿಯನ್ನು ನುಪೈಲಾ ಅವರ ಖಾತೆಗೆ ಜಮೆ ಮಾಡಿರುತ್ತಾರೆ. ಆ ಬಳಿಕ ಅದೇ ಸಂಸ್ಥೆಯವರೆಂದು ಪರಿಚಯಿಸಿಕೊಂಡ ಅಪರಿಚಿತ ಆರೋಪಿ, ಫೆ 8 ರಿಂದ 12ರ ಅವಧಿಯಲ್ಲಿ, ವಿವಿಧ ಖಾತೆಗಳಿಗೆ ನುಫೈಲಾ ಅವರ ಖಾತೆಯಿಂದ ಆನ್ ಲೈನ್ ಮೂಲಕ ಒಟ್ಟು 6,95,148/- ರೂಪಾಯಿಗಳನ್ನು ವರ್ಗಾಯಿಸಿಕೊಂಡಿದ್ದಾರೆ. ವರ್ಗಾಯಿಸಿಕೊಂಡ ಹಣವನ್ನು ಮರುಪಾವತಿಸದೇ ಆನ್ ಲೈನ್ ಮೂಲಕ ವಂಚಿಸಿರುವುದಾಗಿ ನೀಡಿದ ದೂರಿನಂತೆ ಬೆಳ್ತಂಗಡಿ ಪೆಂಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 20/2024 ಕಲಂ 419, 420 ಐಪಿಸಿ ಹಾಗೂ 66 (ಡಿ) ಐಟಿ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!