Monday, April 29, 2024
spot_imgspot_img
spot_imgspot_img

ಬರೋಬ್ಬರಿ 17,500 ರೂ ಕೊಟ್ಟು ಫೇಶಿಯಲ್ ಮಾಡಿಸಿ ಮುಖ ಸುಟ್ಟುಕೊಂಡ ಯುವತಿ; ಬ್ಯೂಟಿ ಸಲೂನ್ ವಿರುದ್ಧ ಎಫ್‍ಐಆರ್ ದಾಖಲು

- Advertisement -G L Acharya panikkar
- Advertisement -

ಯುವತಿಯೊಬ್ಬಳು ತಾನು ಚಂದ ಕಾಣಿಸಬೇಕು ಎಂದು ಬರೋಬ್ಬರಿ 17,500 ರೂ ಕೊಟ್ಟು ಫೇಶಿಯಲ್ ಮಾಡಿಸಿಕೊಂಡಿದ್ದಾಳೆ. ಮುಖದ ಅಂದವನ್ನು ಹೆಚ್ಚಿಸುವ ಸಲುವಾಗಿ ಯುವತಿ ಫೇಶಿಯಲ್‌ ಮಸಾಜ್‌ ಟ್ರೀಟ್ಮೆಂಟ್ ಮಾಡಿಸಿದ್ದಾಳೆ. ಆ ಬಳಿಕ ಆಕೆಯ ಮುಖದ ಚರ್ಮದಲ್ಲಿ ಸುಟ್ಟ ಗಾಯಗಳಾಗಿದ್ದು, ಶಾಶ್ವತ ಹಾನಿಗೊಳಗಾಗಿದೆ. ಈ ಹಿನ್ನೆಲೆ ಯುವತಿ ಮುಂಬೈನಲ್ಲಿರುವ ಬ್ಯೂಟಿ ಸಲೂನ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾಳೆ.

ವೈದ್ಯಕೀಯ-ದರ್ಜೆಯ ರೀಸರ್ಫೇಸಿಂಗ್ ಚಿಕಿತ್ಸೆ ಹೈಡ್ರಾಫೇಶಿಯಲ್. ಇದು ರಂಧ್ರಗಳನ್ನು ಕ್ಲಿಯರ್ ಮಾಡುತ್ತದೆ. ಅಲ್ಲದೆ ಚರ್ಮವನ್ನು ಕೂಡ ಹೈಡ್ರೇಟ್ ಮಾಡುತ್ತದೆ. ಪರವಾನಗಿ ಪಡೆದ ವೈದ್ಯಕೀಯ ವೃತ್ತಿಪರ ಅಥವಾ ಪ್ರಮಾಣೀಕೃತ ಹೈಡ್ರಾಫೇಶಿಯಲ್ ಸೌಂದರ್ಯಶಾಸ್ತ್ರಜ್ಞರು ಲಭ್ಯವಿರುವಲ್ಲಿ ಮಾತ್ರ ಈ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಸದ್ಯ ಈ ಚಿಕಿತ್ಸೆ ಪಡೆದ ಯುವತಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಯುವತಿ ಚರ್ಮ ತಜ್ಞರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಮಸಾಜ್‍ನಿಂದ ಚರ್ಮದಲ್ಲಿ ಸುಟ್ಟಗಾಯಗಳು ಆಗಿರುವುದು ಬಯಲಾಗಿದೆ. ಈ ಸಮಸ್ಯೆ ಶಾಶ್ವತವಾಗಿ ಉಳಿಯುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ಬೇಸರಗೊಂಡು ಯುವತಿ ಸ್ಥಳೀಯ ಎಂಎನ್‍ಎಸ್ ಕಾರ್ಪೊರೇಟರ್ ಪ್ರಶಾಂತ್ ರಾಣೆ ಸಹಾಯದಿಂದ ಎಫ್‍ಐಆರ್ ದಾಖಲಿಸಿದ್ದಾರೆ. ಇತ್ತ ಈ ಸಂಬಂಧ ಯುವತಿ ತನಗಾಗಿರುವ ಸಮಸ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು, ಟ್ವಿಟ್ಟರ್ ಬಳಕೆದಾರರು ಘಟನೆಯ ಬಗ್ಗೆ ಆಘಾತದಿಂದ ಪ್ರತಿಕ್ರಿಯಿಸಿದ್ದಾರೆ.

- Advertisement -

Related news

error: Content is protected !!