Tuesday, June 23, 2026
spot_imgspot_img
spot_imgspot_img

ಹದಿನೈದು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ಯುವತಿ ಆತ್ಮಹತ್ಯೆಗೆ ಶರಣು; ಕಾರಣ ಅಸ್ಪಷ್ಟ

- Advertisement -
- Advertisement -

ಹದಿನೈದು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ಯುವತಿಯೊಬ್ಬಳು ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ತಿರುವನಂತಪುರಂನ ತನ್ನಿಚಂಕುಝಿ ವಿಪಿನ್ ಅವರ ಪತ್ನಿ ಸೋನಾ (22) ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸೋನಾ ನೇಣು ಬಿಗಿದುಕೊಂಡಿರುವುದನ್ನು ಆಕೆಯ ಪತಿ ಗಮನಿಸಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರಾದರೂ ಸೋನಾ ಸಾವನ್ನಪ್ಪಿದ್ದಾರೆ. ಇಬ್ಬರದ್ದೂ ಪ್ರೇಮ ವಿವಾಹವಾಗಿತ್ತು. ಕಟ್ಟಕ್ಕಡ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರು ಆಕೆಯ ಪತಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಕಟ್ಟಕ್ಕಡ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ. ಸೋನಾ ಅವರು ಕಟ್ಟಕ್ಕಡದ ಆಧಾರ್ ಬರೆಯುವ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು.

- Advertisement -

Related news

error: Content is protected !!