Saturday, June 28, 2025
spot_imgspot_img
spot_imgspot_img

ಸ್ನೇಹಿತೆಯ ಮನೆಗೆ ಪುಸ್ತಕ ಕೊಡಲು ಹೋದ ಯುವತಿ ನಾಪತ್ತೆ…!

- Advertisement -
- Advertisement -

ಶಿವಮೊಗ್ಗ:ಯವತಿಯೋರ್ವಳು ಸ್ನೇಹಿತೆಯ ಮನೆಗೆ ಪುಸ್ತಕ ನೀಡಲು ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ವಾಪಾಸ್ಸು ಬಾರದೆ ನಾಪತ್ತೆಯಾದ ಘಟನೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ ಮಿಳಘಟ್ಟ 3ನೇ ಕ್ರಾಸ್ ಎಂಬಲ್ಲಿ ನಡೆದಿದೆ.

ನಾಪತ್ತೆಯಾದ ಯುವತಿ ನಾಗೇಶ್ ಎಂಬುವವರ ಮಗಳು ಪವಿತ್ರ (17) ಎಂದು ಗುರುತಿಸಲಾಗಿದೆ.

ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ ಮಿಳಘಟ್ಟ 3ನೇ ಕ್ರಾಸ್ ವಾಸಿ ನಾಗೇಶ್ ಎಂಬುವವರ ಮಗಳು 17 ವರ್ಷದ ಪವಿತ್ರ ಎಂಬ ಯುವತಿ ಏಪ್ರಿಲ್ -19 ರಂದು ಸ್ನೇಹಿತೆಯ ಮನೆಗೆ ಪುಸ್ತಕ ನೀಡಲು ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಈವರೆಗೂ ವಾಪಾಸ್ಸು ಬಂದಿರುವುದಿಲ್ಲ. ಈಕೆಯ ಚಹರೆ 5.1 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಬಲಕಿವಿಯ ಕೆಳಗೆ ಕಪ್ಪು ಮಚ್ಚೆ ಇರುತ್ತದೆ. ಈಕೆ ಕಾಫಿ ಕಲರ್ ಚೂಡಿದಾ‌ರ್ ಧರಿಸಿರುತ್ತಾಳೆ.

ಈ ಯುವತಿಯ ಮಾಹಿತಿ ಸಿಕ್ಕಿದಲ್ಲಿ, ದೊಡ್ಡಪೇಟೆ ಪೊಲೀಸ್ ಠಾಣಾ ದೂರವಾಣಿ ನಂ 08182-261414 ಅಥವಾ 9611761255 ಗಳನ್ನು ಸಂಪರ್ಕಿಸಲು ಕೋರಿದೆ.

- Advertisement -

Related news

error: Content is protected !!