Monday, May 6, 2024
spot_imgspot_img
spot_imgspot_img

ಸೌದಿ ಅರೇಬಿಯಾದಲ್ಲಿ ಉಚಿತವಾಗಿ ಕೊರೊನಾ ಲಸಿಕೆ ವಿತರಿಸಲು ನಿರ್ಧಾರ

- Advertisement -G L Acharya panikkar
- Advertisement -

ಅಬು ಧಾಬಿ: ಸೌದಿ ಅರೇಬಿಯಾದ ಜನತೆಗೆ ಉಚಿತವಾಗಿ ಕರೊನಾ ಲಸಿಕೆ ವಿತರಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. 2021ರ ಅಂತ್ಯದ ವೇಳೆಗೆ ಶೇ.70ರಷ್ಟು ಜನಸಂಖ್ಯೆಗೆ ಸಾಕಾಗುವಷ್ಟು ಲಸಿಕೆಗಳನ್ನು ಹೊಂದುವ ಭರವಸೆ ಇದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

16 ವರ್ಷದೊಳಗಿನವರಿಗೆ ಕೊರೊನಾ ಲಸಿಕೆ ನೀಡುವುದಿಲ್ಲ. ಸೌದಿ ಅರೇಬಿಯಾಗೆ ಶೀಘ್ರ ಕೋವ್ಯಾಕ್ಸ್ ಲಸಿಕೆಯ ಸರಬರಾಜಾಗಲಿದೆ. ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಶೇ.90ರಷ್ಟು ಪರಿಣಾಮಕಾರಿ ಎಂದು ಸೆರಂ ಇನ್‌ಸ್ಟಿಟ್ಯೂಟ್ ಹೇಳಿದೆ.ಜೊತೆಗೆ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳೂ ಕಂಡು ಬಂದಿಲ್ಲ ಎಂದು ಕಂಪನಿ ತಿಳಿಸಿದೆ. ಮೊದಲಿಗೆ ಒಂದು ಡೋಸ್‌ ನೀಡಿ ನಂತರ ಒಂದು ತಿಂಗಳ ಬಳಿಕ ಅರ್ಧ ಡೋಸ್‌ ನೀಡಿದಾಗ ಕೊರೊನಾ ವೈರಸ್‌ ತಡೆಗಟ್ಟುವಲ್ಲಿ ಲಸಿಕೆಯು ಶೇ. 90ರಷ್ಟು ಯಶಸ್ವಿಯಾಗಿದೆ.

ಲಸಿಕೆಯ ಮಾನವರ ಮೇಲಿನ ಪರೀಕ್ಷೆಯ ಮಧ್ಯಂತರ ದತ್ತಾಂಶಗಳನ್ನು ಸಂಸ್ಥೆಯ ಸೋಮವಾರ ಬಿಡುಗಡೆ ಮಾಡಿದೆ. ಬ್ರಿಟನ್‌ ಮತ್ತು ಬ್ರೆಜಿನ್‌ನಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ ಇದು ಋಜುವಾತಾಗಿದೆ ಎಂದು ಸಂಸ್ಥೆ ತಿಳಿಸಿದೆ. ಜೊತೆಗೆ ಸುರಕ್ಷತೆಗೆ ಸಂಬಂಧಿಸಿದಂತೆ ಯಾವುದೇ ಗಂಭೀರ ಪರಿಣಾಮಗಳೂ ಕಾಣಿಸಿಕೊಂಡಿಲ್ಲ ಎಂದು ಹೇಳಿದೆ.

ಜಿ20 ಶೃಂಗಸಭೆ ಈ ಬಾರಿ ಸೌದಿ ಅರೇಬಿಯಾದಲ್ಲಿ ನಡೆಯುತ್ತದೆ. ಮುಂದಿನ ವರ್ಷದ ಅಂತ್ಯದೊಳಗೆ ಶೇ.70ರಷ್ಟು ಜನರಿಗೆ ಕೊರೊನಾ ಲಸಿಕೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಅಲ್ಲಿನ ಸರ್ಕಾರ ಹೇಳಿದೆ.

- Advertisement -

Related news

error: Content is protected !!