Wednesday, July 29, 2026
spot_imgspot_img
spot_imgspot_img

ಸುರತ್ಕಲ್‌ : ದ್ವಿಚಕ್ರ ವಾಹನ ಢಿಕ್ಕಿ; ಪಾದಚಾರಿ ಮಹಿಳೆ ಮೃತ್ಯು

- Advertisement -
- Advertisement -

ಸುರತ್ಕಲ್‌ : ರಾಷ್ಟ್ರೀಯ ಹೆದ್ದಾರಿ ದಾಟಲು ನಿಂತಿದ್ದ ಮಹಿಳೆಯೊಬ್ಬರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಆಕೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಮಂಗಳವಾರ ಹೊಸಬೆಟ್ಟು ನೀಲಗಿರೀಸ್‌ ಮುಂಭಾಗ ವರದಿಯಾಗಿದೆ.ಮೃತರನ್ನು ಹೊಸಬೆಟ್ಟು ರಿಜೇಂಟ್ ಪಾರ್ಕ್ ನವ ನಗರ ನಿವಾಸಿ ಉಷಾ (62) ಎಂದು ತಿಳಿದು ಬಂದಿದೆ.ಅಪಘಾತದಲ್ಲಿ ದ್ವಿಚಕ್ರ ಸವಾರ ರವಿಚಂದ್ರನ್‌ ಅವರಿಗೂ ಗಾಯಗಳಾಗಿದ್ದು, ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.ಉಷಾ ಅವರು ಮಂಗಳವಾರ ಬೆಳಗ್ಗೆ 11:30ರ ಸುಮಾರಿಗೆ ಹೊಸಬೆಟ್ಟುವಿನ ರಾಘವೇಂದ್ರ ಮಠಕ್ಕೆ ಹೋಗಿ, ಅಲ್ಲಿಂದ ವಾಪಾಸು ರಿಜೇಂಟ್ ಪಾರ್ಕ್ ನವನಗರದಲ್ಲಿರುವ ಅವರ ಮನೆಗೆ ಹೋಗಲು ಬೈಕಂಪಾಡಿ ಕಡೆಯಿಂದ ಸುರತ್ಕಲ್ ಕಡೆಗೆ ಹೋಗುವ ರಸ್ತೆಯ ಬದಿಗೆ ತಲುಪುತ್ತಿದ್ದಂತೆ ಬೈಕಂಪಾಡಿ ಕಡೆಯಿಂದ ಸುರತ್ಕಲ್ ಕಡೆಗೆ ಬಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಘಟನೆಯಿಂದ ಉಷಾ ಅವರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದು, ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ಅವರು ಮೃತಪಟ್ಟರೆಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!