Monday, June 8, 2026
spot_imgspot_img
spot_imgspot_img

ಉಳ್ಳಾಲ: ಹಣ್ಣುಹಂಪಲು ಹೊತ್ತ ಟೆಂಪೋ ಬ್ರೇಕ್ ವೈಫಲ್ಯದಿಂದಾಗಿ ಪಲ್ಟಿ

- Advertisement -
- Advertisement -

ಉಳ್ಳಾಲ: ಹಣ್ಣುಹಂಪಲು ಹೊತ್ತ ಟೆಂಪೋ ವಾಹನ ಬ್ರೇಕ್ ವೈಫಲ್ಯದಿಂದಾಗಿ ಪಲ್ಟಿಯಾದ ಘಟನೆ ಮುಟಿಪು ಮಿತ್ತಕೋಡಿ ಎಂಬಲ್ಲಿ ಸಂಭವಿಸಿದೆ.

ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯಿಂದ ಮೆಲ್ಕಾರ್ ಕಡೆಗೆ ಹಣ್ಣುಹಂಪಲು ಹೊತ್ತು ತೆರಳುತ್ತಿದ್ದ ಟೆಂಪೋ ಮಿತ್ತಕೋಡಿ ತಿರುವು ಬಳಿ ಬ್ರೇಕ್ ವೈಫಲ್ಯಕ್ಕೀಡಾಗಿದೆ. ಬಳಿಕ ಚಾಲಕನ ನಿಯಂತ್ರಣ ತಪ್ಪಿ ಐದು ಅಡಿ ಆಳದ ಕಂದಕಕ್ಕೆ ಉರುಳಿಬಿದ್ದಿದೆ.

ಘಟನೆಯಿಂದ ಟೆಂಪೊದಲ್ಲಿದ್ದ ಚಾಲಕನಿಗೆ ಸ್ವಲ್ಪ ಗಾಯಗಳಾಗಿವೆ. ರಸ್ತೆಯಿಡೀ ಹಣ್ಣುಹಂಪಲುಗಳು ಚೆಲ್ಲಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!