- Advertisement -





- Advertisement -
ವಿಟ್ಲ:ಚಲಿಸುತ್ತಿದ್ದ ಕಾರೊಂದು 40 ಅಡಿ ಆಳಕ್ಕೆ ಉರುಳಿ ಬಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ವಿಟ್ಲ-ಕನ್ಯಾನ ರಸ್ತೆಯ ಬೈರಿಕಟ್ಟೆ ಆನೆಪದವು ಭಜನಾ ಮಂದಿರ ಬಳಿಯ ಅಪಘಾತ ವಲಯ ರಸ್ತೆ ತಿರುವಿನಲ್ಲಿ ನಡೆದಿದೆ.
ವಿಟ್ಲದಿಂದ ಕನ್ಯಾನ ಮೂಲಕ ಬಾಯಾರು ಕಡೆಗೆ ಸಂಚರಿಸುತ್ತಿದ್ದ ಹುಂಡೈ ಬೈರಿಕಟ್ಟೆ ಸಮೀಪದ ಆನೆಪದವು ಭಜನಾ ಮಂದಿರದ ಬಳಿಯ ಕೃಷ್ಣ ನಾಯ್ಕರ ಮನೆಯಂಗಳಕ್ಕೆ ಪಲ್ಟಿ ಹೊಡೆದಿದ್ದು, 40 ಅಡಿ ಆಳಕ್ಕೆ ಬಿದ್ದು ಕಾರು ಸಂಪೂರ್ಣ ಜಖಂಗೊಂಡಿದೆ.
ಘಟನೆಯಲ್ಲಿ ಯಾವುದೇ ಜೀವ ಹಾನಿ ಉಂಟಾಗಿಲ್ಲ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
- Advertisement -