- Advertisement -
- Advertisement -
ಕಾರ್ಕಳ: ಬೈಕ್ ಹಾಗೂ ಟೆಂಪೋ ನಡುವಿನ ಭೀಕರ ಅಪಘಾತದಲ್ಲಿ ಯುವ ಉದ್ಯಮಿಯೋರ್ವರು ಮೃತಪಟ್ಟಿರುವ ಘಟನೆ ಮಿಯ್ಯಾರು ಬಳಿಯ ನಲ್ಲೂರು ಬಸದಿ ತಿರುವಿನಲ್ಲಿ ನಡೆದಿದೆ.
ಯುವ ಉದ್ಯಮಿ ಕಾಶಿನಾಥ್ (38) ಮೃತ ವ್ಯಕ್ತಿ
ಕಲ್ಯಾದ ಹಾಳೆಕಟ್ಟೆಯಲ್ಲಿ ಸಲೂನ್ ಅಂಗಡಿ ಹೊಂದಿದ್ದ ಅವರು ರಾತ್ರಿ ಕೆಲಸ ಮುಗಿಸಿ ಬೈಕಿನಲ್ಲಿ ಮನೆಗೆ ತೆರಳುತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಬಸದಿ ತಿರುವಿನಲ್ಲಿ ಮನೆ ಕಡೆಗೆ ಬೈಕ್ ತಿರುಗಿಸುವಾಗ ಎದುರಿನಿಂದ ವೇಗವಾಗಿ ಬಂದ ಟೆಂಪೋವೊಂದು ಢಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾಶಿನಾಥ್ ಅವರನ್ನು ಕೂಡಲೇ ಕಾರ್ಕಳದ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವಿವಾಹಿತರಾಗಿದ್ದ ಇವರು ತಾಯಿ ಮತ್ತು ಸಹೋದರರಿಬ್ಬರನ್ನು ಅಗಲಿದ್ದಾರೆ.
- Advertisement -