Friday, July 31, 2026
spot_imgspot_img
spot_imgspot_img

ಮೂಡಬಿದ್ರೆ: ಬಸ್ಸಿನಿಂದ ನಿಯಂತ್ರಣ ತಪ್ಪಿ ಪೊದೆಗೆ ಬಿದ್ದ ವಿದ್ಯಾರ್ಥಿ

- Advertisement -
- Advertisement -

ಮೂಡುಬಿದ್ರೆ : ಬಸ್ಸು ಚಲಿಸುತ್ತಿದ್ದಂತೆ ಕಾಲೇಜುವಿದಯಾರ್ಥಿಯೋರ್ವ ನಿಯಂತ್ರಣ ತಪ್ಪಿ ಬಲ್ಲೆಗೆ ಬಿದ್ದ ಘಟನೆ ಡಿ.30 ರಂದು ಮೂಡುಬಿದ್ರೆ ಸಮೀಪ ತೊಡಾರಿನ ಖಾಸಗಿ ಕಾಲೇಜು ಬಳಿ ನಡೆದಿದೆ.ಚಲಿಸುತ್ತಿದ್ದ ಖಾಸಗಿ ಬಸ್‌ನ ಬಾಗಿಲಲ್ಲಿ ನಿಂತಿದ್ದ ವೇಳೆ ಕಾಲೇಜು ನಿಯಂತ್ರಣ ತಪ್ಪಿ ಬಸ್ಸಿಂದ ಬಲ್ಲೆಗೆ ಬಿದ್ದಿದ್ದಾನೆ ಎನ್ನಲಾಗಿದೆ. ಅದೃಷ್ಟವಶಾತ್ ಬಸ್ಸಿಂದ ಬಿದ್ದ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಕಾರ್ಕಾಳ-ಮೂಡುಬಿದರೆ-ಮಂಗಳೂರು ನಡುವೆ ಸಂಚರಿಸುವ ಖಾಸಗಿ ಬಸ್‌ನಲ್ಲಿ ತೋಡಾರಿನ ಕಾಲೇಜು ವಿದ್ಯಾರ್ಥಿಯೊಬ್ಬ ಕಾಲೇಜಿಗೆ ಬರುತ್ತಿರುವ ವೇಳೆ ತನ್ನ ನಿಲ್ದಾಣ ಬರುವ ಮನ್ನವೇ ಇಳಿಯುವ ಅವಸರದಲ್ಲಿ ಬಾಗಿಲ ಬಳಿ ಬಂದು ನಿಂತಿದ್ದ. ಈ ವೇಳೆ ರಸ್ತೆಯ ತಿರುವೊಂದರಲ್ಲಿ ನಿಯಂತ್ರಣ ಕಳೆದುಕೊಂಡ ವಿದ್ಯಾರ್ಥಿ ಬಲ್ಲೆಗೆ ಬಿದ್ದಿದ್ದಾನೆ.ಬಿದ್ದ ಪರಿಣಾಮ ಮುಖ ಪೂರ್ತಿ ರಕ್ತದದಿಂದ ಆವರಿಸಿತ್ತು.ಬಳಿಕ ಬಸ್‌ ನಿರ್ವಾಹಕ ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಯ ಜೀವಕ್ಕೆ ಯಾವುದೇ ತೊಂದರೆ ಇಲ್ಲಾ ಎಂದು ವೈದ್ಯರು ಪರಿಶೀಲಿಸಿ ತಿಳಿಸಿದ್ದಾರೆ.ಬಸಿನಲ್ಲಿದ್ದ ಪ್ರಯಾಣಿಕರು ತಮ್ಮ ದಡ ಸೇರುವ ಸಲುವಾಗಿ ಬದಲಿ ವ್ಯವಸ್ಥೆ ಮಾಡಿದ್ದಾರೆ.

- Advertisement -

Related news

error: Content is protected !!