Sunday, June 14, 2026
spot_imgspot_img
spot_imgspot_img

ಮಂಗಳೂರು :ಬೆಂಗಳೂರಿನಲ್ಲಿ ಅಪಘಾತ ಕುದ್ರೋಳಿಯ ಯುವಕ ಮೃತ್ಯು

- Advertisement -
- Advertisement -

ಮಂಗಳೂರು : ಬೆಂಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಕುದ್ರೋಳಿಯ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಕುದ್ರೋಳಿಯ ಮೊಯ್ದಿನ್ ನಗರದ ಝಹೂರ್-ನಸೀರಾ ದಂಪತಿಯ ಪುತ್ರ ನಾಹಿದ್‌ ಸಫಾನ್‌ (28) ಮೃತಪಟ್ಟ ದುರ್ದೈವಿ.

ಮೃತ ನಾಹಿದ್‌ ಸಫಾನ್‌ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಯಲಹಂಕದ ನೆಹರೂ ನಗರದಲ್ಲಿ ವಾಸವಾಗಿದ್ದರು. ಇವರು ತನ್ನ ಸ್ಕೂಟರ್‌ನಲ್ಲಿ ಯಲಹಂಕದಿಂದ ಬೆಂಗಳೂರು ಕಡೆಗೆ ಸರ್ವಿಸ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಯಲಹಂಕ ಬಿಬಿ ರಸ್ತೆಯ ಏರೋ ಡ್ರಂ ಬಳಿ ಯಾವುದೋ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಒಂದುವರೆ ವರ್ಷದ ಹಿಂದೆ ವಿವಾಹವಾಗಿದ್ದ ನಾಹಿದ್ ಸಫಾನ್ ತಂದೆ ಮತ್ತು ತಾಯಿ ಹಾಗೂ ಅಣ್ಣ, ಅಕ್ಕ, ಪತ್ನಿಯನ್ನು ಅಗಲಿದ್ದಾರೆ. ಯಲಹಂಕ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!