Monday, July 27, 2026
spot_imgspot_img
spot_imgspot_img

ವಿಟ್ಲದಲ್ಲಿ ನಡೆದ ಆಕಸ್ಮಿಕ ಅಗ್ನಿದುರಂತ ಪ್ರಕರಣ: ಅಪಾರ ನಷ್ಟ ಸಂಭವ…!

- Advertisement -
- Advertisement -

ಘಟನಾ ಸ್ಥಳಕ್ಕೆ ಪಕ್ಷದ ಮುಖಂಡರುಗಳು, ಸಂಬಂಧಪಟ್ಟ ಇಲಾಖಾಧಿಕಾರಿಗಳು ಭೇಟಿ, ಪರಿಶೀಲನೆ

ವಿಟ್ಲ ವ್ಯಾಪ್ತಿಯಲ್ಲಿ ಅಗ್ನಿಶಾಮಕದಳ ವ್ಯವಸ್ಥೆ ಇಲ್ಲದಿರುವುದು ನಿನ್ನೆ ನಡೆದ ಅವಘಡದ ತೀವ್ರತೆಗೆ ಕಾರಣ: ಸಾರ್ವಜನಿಕರ ಆಕ್ರೋಶ

ವಿಟ್ಲ: ನಿನ್ನೆ ರಾತ್ರಿ (ಡಿ.31) ವಿಟ್ಲದಲ್ಲಿ ನಡೆದ ಬೆಂಕಿ ಅವಘಡದಲ್ಲಿ ನಾಲ್ಕು ಅಂಗಡಿಗಳು ಸುಟ್ಟು ಭಸ್ಮವಾಗಿದ್ದು, ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗಿದೆ. ವಿಟ್ಲ ಪರಿಸರದಲ್ಲಿ ಇಂದೆಂದೂ ನಡೆಯದ ಅಗ್ನಿ ಅವಘಡ ನಿನ್ನೆ ಇಡೀ ಜಿಲ್ಲೆಯಲ್ಲೇ ಭಯದ ವಾತಾವರಣ ಸೃಷ್ಟಿಸಿದೆ.

ವಿಟ್ಲ ಮಂಗಳೂರು ಮುಖ್ಯ ರಸ್ತೆಯ ಶ್ರೀ ಇಲೆಕ್ಟ್ರೋನಿಕ್ಸ್‌ ಅಂಗಡಿ ಕಳೆದ 25 ವರ್ಷಗಳಿಂದ ಇಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಮಾರಾಟ ಮಳಿಗೆಯಾಗಿ ಜನರ ಪ್ರೀತಿಗೆ ಪಾತ್ರವಾಗಿತ್ತು. ಆದರೆ ನಿನ್ನೆ ನಡೆದ ಬೆಂಕಿ ಅವಘಡದಲ್ಲಿ ಇಡೀ ಅಂಗಡಿಯೇ ಸುಟ್ಟು ಕರಕಲಾಗಿರುವ ಚಿತ್ರಣ ಕಂಡರೆ ಪ್ರತಿಯೊಬ್ಬರ ಕಣ್ಣಂಚಲಿ ಕಣ್ಣೀರು ಸುರಿಯುತ್ತದೆ.

ಘಟನೆಯ ಚಿತ್ರಣ..!

ಡಿ. ಡಿ.31 ರಂದು ರಾತ್ರಿ ಸಂತೋಷ್‌ ಮಾಲಕತ್ವದ ಶ್ರೀ ಇಲೆಕ್ಟ್ರೋನಿಕ್ಸ್‌ ಅಂಗಡಿಯನ್ನು ಮಾಲಕರು ಎಂದಿನಂತೆಯೇ ರಾತ್ರಿ 8 ಗಂಟೆಗೆ ಬಂದ್‌ ಮಾಡಿ ತೆರಳಿದ್ದರು. ಈ ಕ್ಷಣಾರ್ಧದಲ್ಲೇ ಅಂಗಡಿಯೊಳಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಸಾರ್ವಜನಿಕರು ಅಂಗಡಿ ಮಾಲಕರಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ಕೂಡಲೇ ಧಾವಿಸಿದ ಅಂಗಡಿ ಮಾಲಕರು ಬೆಂಕಿಯ ನಡುವೆಯೇ ಶೆಟರ್‌ ತೆರವು ಮಾಡಿದ್ದಾರೆ. ಆಗಾಗಲೇ ಬೆಂಕಿಯ ತೀವ್ರತೆ ಹೆಚ್ಚುತ್ತಿದ್ದು, ತನ್ನ ಅಂಗಡಿಯಲ್ಲಿ ಪೈಪ್‌, ಪೈಬರ್‌ ಐಟಮ್ಸ್‌, ಹಾಗೂ ಇಲೆಕ್ಟ್ರಾನಿಕ್ಸ್‌ ಐಟಮ್ಸ್‌ ಸ್ಕಾಕ್‌ ಇದ್ದ ಕಾರಣ ಅಂಗಡಿ ಪೂರ್ತಿ ಬೆಂಕಿ ಹಚ್ಚಿಕೊಂಡಿದೆ. ಬೆಂಕಿಯ ತಿರುವು ಹೆಚ್ಚಾಗುತ್ತಿದ್ದಂತೆ, ಸ್ಥಳೀಯ ಅಂಗಡಿಗಳಾದ ಟೈಲರ್‌ ಶಾಪ್‌, ಫೈವ್ ಸ್ಟಾರ್‌ ವೈನ್ಸ್‌, ಹಾಗೂ ಅಮಿತ್‌ ಹೊಟೇಲ್‌ನವರೆಗೂ ಬೆಂಕಿ ಆವರಿಸಿದೆ. ಬೆಂಕಿಯ ತೀವ್ರತೆ ಜ್ವಾಲಾಮುಖಿಯಂತೆ ಇಡೀ ವಿಟ್ಲ ಪೇಟೆಯನ್ನೇ ಆವರಿಸುವ ವೇಳೆ ಸುಮಾರು 2000 ಕ್ಕೂ ಅಧಿಕ ಜನರು ಜಮಾಯಿಸಿ ತಮ್ಮಿಂದಾಗುವಷ್ಟು ಬೆಂಕಿ ನಂದಿಸುವಲ್ಲಿ ತಮ್ಮ ಶ್ರಮ ವಹಿಸಿದ್ದಾರೆ. ಬಳಿಕ ಬಂಟ್ವಾಳದಿಂದ ಹಾಗೂ ಸುಳ್ಯದಿಂದ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

ಬೆಂಕಿ ಅವಘಡದಲ್ಲಿ ಶ್ರೀ ಇಲೆಕ್ಟ್ರೋನಿಕ್ಸ್‌ನಲ್ಲಿದ್ದ ಎಲ್ಲಾ ಉಪಕರಣಗಳು ಸುಟ್ಟು ಭಸ್ಮವಾಗಿದ್ದು ಸುಮಾರು 80 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ. ಅಲ್ಲದೇ ಉಳಿದ ಮೂರು ಅಂಗಡಿಗಳಲ್ಲಿದ್ದ ಎಲ್ಲಾ ವಸ್ತು, ಉಪಕರಣಗಳು ಸುಟ್ಟು ಭಸ್ಮವಾಗಿದ್ದು, ಅಪಾರ ನಷ್ಟ ಸಂಭವಿಸಿದೆ ಎಂದು ಅಂಗಡಿಗಳ ಮಾಲಕರು ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ಸಾರ್ವಜನಿಕರ ಆಕ್ರೋಶ

ಘಟನೆಯ ಬಗ್ಗೆ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಸಾರ್ವಜನಿಕರು ’ಬೆಂಕಿ ಉರಿಯುತ್ತಿದ್ದಾಗಲೇ ಎಲ್ಲರೂ ಅಗ್ನಿ ಶಾಮಕ ದಳದವರಿಗೆ ಕರೆ ಮಾಡಿದ್ದೇವೆ. ಆದರೆ ಬೆಂಕಿ ಬಾನೆತ್ತರದಲ್ಲಿ ಉರಿಯುತ್ತಿದ್ದರೂ, ಘಟನೆ ನಡೆದು ಒಂದು ಗಂಟೆ ಬಳಿಕ ಅಗ್ನಿಶಾಮಕ ದಳ ಧಾವಿಸಿದೆ. ಪುತ್ತೂರಿನಿಂದ ವಿಟ್ಲಕ್ಕೆ ತುರ್ತ ವಾಹನಗಳು ಸಾಗಿ ಬರಲು ಕೇವಲ 10-15 ನಿಮಿಷ ಸಾಕು.. ಆದರೆ ಒಂದು ಗಂಟೆ ಕಳೆದರೂ ಅಗ್ನಿಶಾಮಕ ವಾಹನ ಬಂದಿಲ್ಲ. ಒಂದು ಗಂಟೆ ಬಳಿಕ ಬಂದ ಅಗ್ನಿಶಾಮಕ ವಾಹನದಲ್ಲಿ ನೀರಿನ ಕೊರತೆ ಕಂಡುಬಂದಿದ್ದು, ಬೆಂಕಿ ನಂದಿಸವಲ್ಲಿ ಮತ್ತಷ್ಟು ವಿಳಂಬಕ್ಕೆ ಕಾರಣವಾಯಿತು. ಮುರಳೀ ವಿಟ್ಲರವರ ಸಹಕಾರ ಸೇರಿದಂತೆ ನೆರೆದಿದ್ದ ಎಲ್ಲಾ ಸಾರ್ವಜನಿಕರ ಶ್ರಮದಿಂದ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಬೆಂಕಿಯ ತೀವ್ರತೆ ಇನ್ನೂ ಹೆಚ್ಚಾಗಲು ಕಾರಣ ಅಗ್ನಿಶಾಮಕದಳ ಸರಿಯಾದ ಸಮಯಕ್ಕೆ ಬರದೇ ಇರುವುದು. ಆದ್ದರಿಂದ ಮುಂದೆ ಇಂತಹ ಘಟನೆಗಳು ನಡೆಯವಾರದು, ಇದಕ್ಕಾಗಿ ವಿಟ್ಲ ಪೇಟೆಗೆ ಅಗ್ನಿಶಾಮಕ ದಳದ ವಾಹನ ಸೌಲಭ್ಯ ತುರ್ತಾಗಿ ಒದಗಿಸುವಂತೆ ಮನವಿ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ವಿಟ್ಲ ಪಟ್ಟಣ ಪಂಚಾಯತ್‌ ಅಧ್ಯಕ್ಷ ಕರುಣಾಕರ ಗೌಡ ನಾಯ್ತೊಟ್ಟು, ಉಪಾಧ್ಯಕ್ಷೆ ಶ್ರೀಮತಿ ಸಂಗೀತ ಪಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷರು ಅಶೋಕ್‌ ಕುಮಾರ್‌ ಶೆಟ್ಟಿ ಸೇರಿದಂತೆ ಅನೇಕ ಪಕ್ಷದ ಮುಖಂಡರುಗಳು, ಸಂಬಂಧಪಟ್ಟ ಇಲಾಖಾಧಿಕಾರಿಗಳು, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Related news

error: Content is protected !!