Saturday, June 13, 2026
spot_imgspot_img
spot_imgspot_img

ಬೆಳ್ಳಾರೆ: ಆಕ್ಟಿವಾ ಮರಕ್ಕೆ ಡಿಕ್ಕಿ: ಸಹಸವಾರ ಮೃತ್ಯು

- Advertisement -
- Advertisement -

ಬೆಳ್ಳಾರೆ: ಆಕ್ಟಿವಾ ಮರಕ್ಕೆ ಡಿಕ್ಕಿಯಾಗಿ ಯುವಕನೋರ್ವ ಮೃತಪಟ್ಟ ಘಟನೆ ಬೆಳ್ಳಾರೆ ಸಮೀಪದ ಪೆರುವಾಜೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಮೃತ ಯುವಕನನ್ನು ಉಮಿಕ್ಕಳ ನಿವಾಸಿ ಮಹಮ್ಮದ್ ರಾಝಿಕ್ (16) ಎಂದು ಗುರುತಿಸಲಾಗಿದೆ.

ಮಹಮ್ಮದ್ ರಾಝಿಕ್ ಮರದ ವ್ಯಾಪಾರಿ ಅಬ್ದುಲ್ ರಝಾಕ್ ಎಂಬವರ ಪುತ್ರನಾಗಿದ್ದು, ಈತ ಬೆಳ್ಳಾರೆಯಿಂದ ತರಕಾರಿ ಮತ್ತು ಹಣ್ಣುಹಂಪಲು ಖರೀದಿಸಿ ಬೆಳ್ಳಾರೆಯ ಕುಂಡಡ್ಕದಲ್ಲಿರುವ ಅಜ್ಜಿ ಮನೆಗೆ ಸಂಬಂಧಿ ಜೊತೆ ಆಕ್ಟಿವಾದಲ್ಲಿ ತೆರಳುತ್ತಿದ್ದ ವೇಳೆ ಕಾಡುಹಂದಿಗಳ ಗುಂಪೊಂದು ಹಠತ್ತಾಗಿ ರಸ್ತೆ ದಾಟಿದೆ.

ಈ ವೇಳೆ ಆಕ್ಟಿವಾ ಸವಾರ ಹಂದಿಗಳನ್ನು ನೋಡಿ ಗಾಬರಿಗೊಂಡು ಬ್ರೇಕ್ ಹಾಕಿದ್ದು ರಸ್ತೆ ಬದಿಯ ಮರಕ್ಕೆ ಆಕ್ಟಿವಾ ಡಿಕ್ಕಿ ಹೊಡೆದಿದೆ. ಈ ವೇಳೆ ಹಿಂಬದಿ ಸವಾರ ರಾಝಿಕ್ ತಲೆ ಮರಕ್ಕೆ ಬಡಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅಲ್ಲಿದ್ದ ಯುವಕರು ರಾಝಿಕ್ ನನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ.

- Advertisement -

Related news

error: Content is protected !!