Wednesday, April 24, 2024
spot_imgspot_img
spot_imgspot_img

ವಿಟ್ಲ: ಕೊರಗಜ್ಜ ದೈವಕ್ಕೆ ಅಪಮಾನ ಪ್ರಕರಣ; ಬಂಧಿತ ಆರೋಪಿಗಳಿಗೆ ನ್ಯಾಯಾಂಗ ಬಂಧನ.!

- Advertisement -G L Acharya panikkar
- Advertisement -

ಬಂಟ್ವಾಳ: ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ಎಂಬಲ್ಲಿ ಅನ್ಯಧರ್ಮದ ಮದುವೆ ಮನೆಯಲ್ಲಿ ಹಿಂದೂಗಳ ಆರಾಧ್ಯ ದೈವ ಸ್ವಾಮಿ ಕೊರಗಜ್ಜನ ವೇಷವನ್ನು ಧರಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು , ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬಂಧಿತರನ್ನು ಮಂಗಲ್ಪಡಿ ನಿವಾಸಿ ಪಾತಿಮಾ ಡ್ರೆಸ್ ಪುತ್ತೂರು ಇದರ ಮಾಲಕ ಅಹಮದ್ ಮೂಜಿತಬ(28), ಗಾಳಿಯಡ್ಕ ಬಾಯರ್ ಪದವು ನಿವಾಸಿ ಮೊಯ್ದೀ ನ್ ಮುನಿಶ್ (19) ಎನ್ನಲಾಗಿದ್ದು, ವಿಟ್ಲ ಪೊಲೀಸರ ತಂಡವು ಇವರನ್ನು ಬಾಯಾರ್ ಪದವು ಹಾಗೂ ಬೆಟ್ಟಂಪಾಡಿಯಲ್ಲಿ ಬಂಧಿಸಿದ್ದು , ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ವಿಟ್ಲ: ಮುಸ್ಲಿಂ ಸಮುದಾಯದ ಮದುವೆ ಸಂಭ್ರಮದಲ್ಲಿ ಕೊರಗಜ್ಜನ ವೇಷ ಧರಿಸಿ ಡಾನ್ಸ್ ಮಾಡಿದ ವರ.?


ವಿಟ್ಲ ಹಿಂದೂಜಾಗರಣೆ ವೇದಿಕೆ ಕಾರ್ಯದರ್ಶಿ ನೀಡಿದ ದೂರಿನಂತೆ ಅ.ಕ್ರ .04/2021 ಕಲಂ:153ಎ,295 ಭಾಧಂಸಂರಂತೆ ಪ್ರಕರಣ ದಾಖಲಾಗಿತ್ತು. ಇದರ ತನಿಖೆ ನಡೆಸುತ್ತಿದ್ದ ವಿಟ್ಲ ಠಾಣೆ ಪೊಲೀಸರು ಮದುಮಗ ಬಾಷಿತ್ ಸಹೋದರ ಅರ್ಷಾದ್ ನನ್ನು ಜ .8 ರಂದುಮಂಜೇಶ್ವರದಲ್ಲಿ ವಶಕ್ಕೆ ಪಡೆದು ವಿಟ್ಲ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಆತನನ್ನು ಬಿಡುಗಡೆಗೊಳಿಸಿದ್ದರು.

suvarna gold

- Advertisement -

Related news

error: Content is protected !!