Thursday, June 11, 2026
spot_imgspot_img
spot_imgspot_img

ಕನ್ನಡದ ಹಿರಿಯ ನಟ, ಪಾಪ ಪಾಂಡು ಧಾರವಾಹಿ ಖ್ಯಾತಿಯ ಶಂಕರ್ ರಾವ್ ಇನ್ನಿಲ್ಲ

- Advertisement -
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಪಾಪ ಪಾಂಡು ಧಾರವಾಹಿ ಮೂಲತ ಅತ್ಯಂತ ಜನಪ್ರೀಯ ಖ್ಯಾತಿಯನ್ನು ಗಳಿಸಿದ್ದಂತ, ಹಿರಿಯ ಕಲಾವಿಧ ಶಂಕರ್ ರಾವ್ (84) ಇಂದು ನಿಧನರಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಂತ ಹಿರಿಯ ನಟ ಶಂಕರ್ ರಾವ್ ಅವರಿಗೆ ಚಿಕಿತ್ಸೆ ಕೂಡ ಕೊಡಿಸಲಾಗುತ್ತಿತ್ತು. ಆದರೆ ಇಂದು ಬೆಳಿಗ್ಗೆ 6.30ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಪಾಪ ಪಾಂಡು ಖ್ಯಾತಿಯ ಹಿರಿಯ ನಟ ಶಂಕರ್ ರಾವ್ ಇನ್ನಿಲ್ಲವಾಗಿದ್ದಾರೆ.

ಶಾಲಾ ದಿನಗಳಿಂದಲೂ ನಟನೆಯಲ್ಲಿ ತುಂಬಾನೇ ಆಸಕ್ತಿಯನ್ನು ಹೊಂದಿದ್ದಂತ ಕಲಾವಿಧ ಶಂಕರ್ ರಾವ್, ಹವ್ಯಾಸಿ ರಂಗಭೂಮಿಯಲ್ಲಿ ಕಲಾವಿದರಾಗಿ ಪಾದಾರ್ಪಣೆ ಮಾಡಿದ್ದರು. ಹಲವಾರು ಸಿನಿಮಾ ಸೇರಿದಂತೆ ನಾಟಕಗಳಲ್ಲಿ ನಟಿಸಿದ್ದರು. ಇವರಿಗೆ ಹೆಚ್ಚು ಖ್ಯಾತಿ ತಂದಿಕೊಟ್ಟಿದ್ದು ಪಾಪಾ ಪಾಂಡು ಧಾರಾವಾಹಿ ಆಗಿತ್ತು.

vtv vitla
- Advertisement -

Related news

error: Content is protected !!