Sunday, October 18, 2026
spot_imgspot_img
spot_imgspot_img

ಶಿವಮೊಗ್ಗ: ಮನೆ ಬಳಿ ಆಟವಾಡುತ್ತಿದ್ದ ಮಗುವಿಗೆ ಹಾವು ಕಚ್ಚಿ ದುರ್ಮರಣ

- Advertisement -
- Advertisement -

ಶಿವಮೊಗ್ಗ: ಮನೆಯ ಬಳಿ ಆಟವಾಡುತ್ತಿದ್ದ ಎರಡು ವರ್ಷದ ಮಗುವಿಗೆ ಹಾವು ಕಚ್ಚಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸಾಗರ ತಾಲೂಕಿನ ಕಲಸಿಪೇಟೆ ಗ್ರಾಮದಲ್ಲಿ ನಡೆದಿದೆ.

ಯುನೈ (2) ಹಾವು ಕಚ್ಚಿ ಮೃತಪಟ್ಟ ಬಾಲಕ. ನಾಡಕಲಸಿ ಗ್ರಾ.ಪಂ ವ್ಯಾಪ್ತಿಯ ಕಲಸಿಪೇಟೆಯ ನಿವಾಸಿಗಳಾದ ಅನಿಲ್ ಹಾಗೂ ರೂಪ ದಂಪತಿಯ ಪುತ್ರ ಯುನೈ ಮನೆಯ ಬಳಿ ಆಟವಾಡುತ್ತಿದ್ದ. ಈ ವೇಳೆ ಮಗುವಿಗೆ ಹಾವು ಕಚ್ಚಿದೆ. ಇದನ್ನ ಗಮನಿಸಿ ಬಾಲಕನನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮಗು ಸಾವನ್ನಪ್ಪಿದ್ದಾನೆ.

ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

- Advertisement -

Related news

error: Content is protected !!