Tuesday, May 7, 2024
spot_imgspot_img
spot_imgspot_img

ಇಸ್ರೋದಿಂದ “ಸೂರ್ಯಶಿಕಾರಿ”; ಯಶಸ್ವಿಯಾಗಿ ಸೂರ್ಯನತ್ತ ಹಾರಿದ ಆದಿತ್ಯ L1

- Advertisement -G L Acharya panikkar
- Advertisement -
vtv vitla

ಚಂದ್ರಯಾನ-3 ದೊಡ್ಡಮಟ್ಟದ ಯಶಸ್ಸಿನ ಬಳಿಕ ಇಸ್ರೋ ಮತ್ತೊಂದುಮಹತ್ವದ ಹೆಜ್ಜೆಯನ್ನು ಇರಿಸಿದೆ. ಆಂಧ್ರದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ L-1 ನೌಕೆ 11.50ಕ್ಕೆ ಸರಿಯಾಗಿ ಉಡಾವಣೆಯಾಗಿದೆ. ಅದರೊಂದಿಗೆ ಭಾರತದ ಹಿರಿಮೆಯನ್ನು ಸೂರ್ಯನ ಎತ್ತರಕ್ಕೆ ಇಸ್ರೋ ಏರಿಸಿದೆ. ಈ ವೇಳೆ ಇಸ್ರೋ ಅಧ್ಯಕ್ಷ ಸೋಮನಾಥ್ ನೇತೃತ್ವದಲ್ಲಿ ವಿಜ್ಞಾನಿಗಳ ತಂಡ ಹಾಜರಿದ್ದರು. ಜೊತೆಗೆ ಆದಿತ್ಯ L1 ಉಡಾವಣೆಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಕೂಡ ಸಾಕ್ಷಿಯಾದರು. ಇಷ್ಟು ಮಾತ್ರವಲ್ಲದೆ ಅಪಾರ ಸಂಖ್ಯೆಯಲ್ಲಿ ಜನಸಾಗರವೇ ನೆರೆದಿತ್ತು.

ಇನ್ನು 126 ದಿನಗಳ ಪ್ರಯಾಣದ ಬಳಿಕ ಆದಿತ್ಯ ಎಲ್‌1 ನೌಕೆ ತನ್ನ ನಿಗದಿತ ಗಮ್ಯಸ್ಥಾನವಾದ ಭೂಮಿ ಹಾಗೂ ಸೂರ್ಯನ ನಡುವಿನ ಎಲ್‌1 ಅನ್ನು ತಲುಪಲಿದೆ. ಅದಕ್ಕೂ ಮುನ್ನ ಆದಿತ್ಯ ಎಲ್‌1 ಭೂಮಿಯ ಸುತ್ತ 16 ದಿನಗಳ ಕಾಲ ಸಂಚರಿಸಲಿದ್ದು, 5 ಕಕ್ಷೆ ಏರಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದೆ.

ಈ ಅಧ್ಯಯನದ ಪ್ರಮುಖ ಅಂಶ ಸೌರ ಚಟುವಟಿಕೆ ಮತ್ತು ಬಾಹ್ಯಕಾಶ ವಾತಾವರಣದ ಮೇಲಿನ ಪರಿಣಾಮವನ್ನ ಅಧ್ಯಯನ ಮಾಡೋದು. ಕಕ್ಷೆಯನ್ನ ತಲುಪಿದ ಬಳಿಕ ರಾಕೆಟ್ ಹೊತ್ತೊಯ್ಯುವ 8 ಉಪಕರಣಗಳ ಸ್ವಿಚ್ ಪ್ರೋಗ್ರಾಂಮಿಂಗ್ ಮೂಲಕ ತಮ್ಮ ಕಾರ್ಯವನ್ನ ಆರಂಭಿಸಲಿವೆ. ಮುಖ್ಯವಾಗಿ ಎಲ್ 1 ಕಕ್ಷೆಯಲ್ಲೇ ಇ ಎಲ್ಲಾ ಕಾರ್ಯಗಳು ಸರಾಗವಾಗಿ ಆಗೋದಕ್ಕೆ ಸಾಧ್ಯ ಇರೋದು. ಆ ಕಾರಣಕ್ಕೆ ಸದ್ಯ ಇಸ್ರೋ ಕೂಡ ಇದೇ ಪಾಯಿಂಟ್ ಅನ್ನು ಆಯ್ಕೆ ಮಾಡಿದೆ.

- Advertisement -

Related news

error: Content is protected !!