- Advertisement -
- Advertisement -






ಪುತ್ತೂರು: ಬೇಲಿಯ ವಿಚಾರದಲ್ಲಿ ತಕರಾರು ತೆಗೆದು ವ್ಯಕ್ತಿಯೋರ್ವರಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಪುತ್ತೂರು ತಾಲೂಕು ಬಲ್ನಾಡು ಎಂಬಲ್ಲಿ ನಡೆದಿದೆ.
ಹಲ್ಲೆ ನಡೆಸಿದ ವ್ಯಕ್ತಿ ಬಾಳು ಹಾಗೂ ಹಲ್ಲೆಗೊಳಗಾದವರನ್ನು ರವಿ ಹಾಗೂ ಅವರ ಮಗ ಲೋಕೇಶ ಎಂದು ಗುರುತಿಸಲಾಗಿದೆ.
ಪುತ್ತೂರು ತಾಲೂಕು ಬಲ್ನಾಡು ನಿವಾಸಿ ರವಿ (53) ಎಂಬವರ ದೂರಿನಂತೆ, ನೆರೆಮನೆಯ ನಿವಾಸಿ ಬಾಲು (43) ಎಂಬಾತನು, ಮನೆ ಬಳಿ ಬಂದು ಬೇಲಿಯ ವಿಚಾರದಲ್ಲಿ ತಕರಾರು ತೆಗೆದು, ಆತನ ಕೈಯಲ್ಲಿದ್ದ ಕತ್ತಿಯಿಂದ ರವಿ ಅವರಿಗೆ ಹಲ್ಲೆ ನಡೆಸಿರುತ್ತಾನೆ. ಈ ವೇಳೆ ಜಗಳ ಬಿಡಿಸಲು ಬಂದ ರವಿ ಅವರ ಮಗನಿಗೂ ಹಲ್ಲೆ ನಡೆಸಿರುತ್ತಾನೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದಿದ್ದು, ರವಿ ಒಳರೋಗಿಯನ್ನಾಗಿ ದಾಖಲಿಸಿ ಮತ್ತು ಲೋಕೇಶನನ್ನು ಹೊರ ರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 57-2024 ಕಲಂ: IPC U/S: 324 ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
- Advertisement -








