Saturday, April 27, 2024
spot_imgspot_img
spot_imgspot_img

ತೂಕವನ್ನು ಕಡಿಮೆ ಮಾಡಬೇಕೆಂದರೆ ಸೇವಿಸಿ ಕರಿಬೇವು

- Advertisement -G L Acharya panikkar
- Advertisement -

ಕರಿಬೇವಿನ ಎಲೆಗಳು ಸೌಂದರ್ಯ ವರ್ಧಕವಾಗಿ, ಉತ್ತಮವಾದ ಆರೋಗ್ಯಕ್ಕೆ ಆಹಾರವಾಗಿ, ಔಷಧಿಯಾಗಿ ಪುರಾತನ ಕಾಲದಿಂದಲೂ ಬಳಸಲಾಗುತ್ತಿದೆ. ಇದು ಯಾವುದೇ ಒಂದು ಖಾದ್ಯದ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸುತ್ತದೆ.
ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಬಿ೨ ಸಮೃದ್ಧವಾಗಿದೆ. ಇದರಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂನ ಉತ್ತಮವಾದ ಮೂಲವನ್ನು ಕೂಡ ಹೊಂದಿದೆ. ಕರಿಬೇವು ಕೇವಲ ಭಕ್ಷ್ಯವನ್ನು ಮಾತ್ರ ರುಚಿ ಮತ್ತು ಸುವಾಸನೆ ನೀಡುವುದಿಲ್ಲ ಬದಲಾಗಿ, ತೂಕ ಇಳಿಸಿಕೊಳ್ಳಲು ಬಯಸುವವರಿಗೆ, ಉತ್ತಮ ಆರೋಗ್ಯಕ್ಕೆ, ಸೌಂದರ್ಯ ವೃದ್ಧಿಸಿಕೊಳ್ಳುವವರಿಗೂ ಕೂಡ ಪ್ರಯೋಜನಕಾರಿ.
ಕರಿಬೇವಿನ ಸೊಪ್ಪಿನಲ್ಲಿ ಕಾರ್ಬಜೋಲ್ ಆಲ್ಕಲಾಯ್ಡ್‌ಗಳು ತೂಕದ ಹೆಚ್ಚಳದ ವಿರುದ್ಧ ಕೆಲಸ ಮಾಡುತ್ತದೆ.ಅಲ್ಲದೆ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಕರಿಬೇವಿನ ಎಲೆಗಳನ್ನು ಸೇವಿಸಿದಾಗ, ತ್ವರಿತ ತೂಕ ನಷ್ಟಕ್ಕೆ ಕಾರಣವಾಗುತ್ತದೆ.ಕರಿಬೇವಿನ ಎಲೆಗಳು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಹೊಟ್ಟೆಯ ಅಸ್ವಸ್ಥತೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
ಕರಿಬೇವಿನ ಎಲೆಗಳು ಕರುಳಿನ ಚಲನೆಯನ್ನು ಬೆಂಬಲಿಸುತ್ತದೆ. ಮುಖ್ಯವಾಗಿ ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ ಎಂದು ಹೇಳಲಾಗುತ್ತದೆ.

- Advertisement -

Related news

error: Content is protected !!