Saturday, June 27, 2026
spot_imgspot_img
spot_imgspot_img

ತಾಲಿಬಾನಿಗಳ ರೂಲ್ಸ್ ಗೆ ಡೋಂಟ್ ಕೇರ್..! ಬುರ್ಖಾ ಬಿಟ್ಟು ಸಂಪ್ರಾದಾಯಿಕ ಉಡುಗೆ ತೊಟ್ಟ ಮಹಿಳೆಯರು

- Advertisement -
- Advertisement -

ಅಫ್ಘಾನಿಸ್ತಾನದ ಮಹಿಳೆಯರು ಬುರ್ಖಾ ಧರಿಸಬೇಕು ಎಂಬ ತಾಲಿಬಾನಿಗಳ ಆದೇಶದ ವಿರುದ್ಧ ಪ್ರತಿಭಟನೆ ಶುರುವಾಗಿದೆ. ಅಲ್ಲಿನ ವಿದ್ಯಾವಂತ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು, ಅದರ ಪೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಆನ್ ಲೈನ್ ಅಭಿಯಾನ ಆರಂಭಿಸಿದ್ದಾರೆ. ಅಫ್ಘಾನಿಸ್ತಾನ್ ಮತ್ತು ವಿದೇಶಗಳಲ್ಲಿ ವಾಸವಾಗಿರುವ ನೂರಾರು ಅಫ್ಘಾನ್ ಮಹಿಳೆಯರು #AfghanistanCulture ಹ್ಯಾಶ್ ಟ್ಯಾಗ್ ಮೂಲಕ ಆನ್ ಲೈನ್ ಅಭಿಯಾನ ಪ್ರಾರಂಭಿಸಿದ್ದಾರೆ.

ಮಹಿಳೆಯರ ಇಡೀ ದೇಹ ಹಾಗೂ ಮುಖ ಮುಚ್ಚಿಕೊಳ್ಳುವ ಬುರ್ಖಾ ಧರಿಸಬೇಕೆಂಬ ತಾಲಿಬಾನ್ ಆದೇಶಕ್ಕೆ ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಖುದ್ದು ಸಾಂಪ್ರದಾಯಿಕ ಉಡುಗೆ ತೊಟ್ಟು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. #DoNotTouchMyClothes  (ನಮ್ಮ ಉಡುಗೆ ವಿಚಾರದಲ್ಲಿ ಹಸ್ತಕ್ಷೇಪ ಬೇಡ) ಎಂಬ ಹ್ಯಾಶ್ ಟ್ಯಾಗ್ ನಡಿಯೂ ಅಭಿಯಾನ ನಡೆಯುತ್ತಿದೆ ಎಂದು ವರದಿ ವಿವರಿಸಿದೆ.

- Advertisement -

Related news

error: Content is protected !!