Sunday, June 21, 2026
spot_imgspot_img
spot_imgspot_img

ಆಂಟಿಯನ್ನು ಮದುವೆಯಾಗಲು ಹೋಗಿ ಕೋಟಿ – ಕೋಟಿ ಹಣ ಕಳೆದುಕೊಂಡ 73ರ ವೃದ್ಧ..!

- Advertisement -
- Advertisement -

ಮುಂಬೈ : ಮಹಿಳೆಯೋರ್ವಳು 73 ವರ್ಷದ ವ್ಯಕ್ತಿಯನ್ನು ಮದುವೆಯಾಗುತ್ತೇನೆಂದು ನಂಬಿಸಿ 1.3 ಕೋಟಿ ರೂ. ಪಡೆದು ಪರಾರಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಹಣವನ್ನು ಪಡೆದು ನಾಪತ್ತೆಯಾಗಿರುವ ಮಹಿಳೆ ಶಾಲಿನಿ ಸಿಂಗ್ ಎನ್ನಲಾಗಿದೆ. ಜೆರೋನ್ ಡಿಸೋಜಾ ಅಂಧೇರಿ(73) ಅವರನ್ನು ಶಾಲಿನಿ ಮದುವೆಯಾಗುತ್ತೇನೆಂದು ನಂಬಿಸಿ ಮೋಸ ಮಾಡಿದ್ದಾಳೆ. ಶಾಲಿನಿ ವಿರುದ್ಧವಾಗಿ ಡಿಸೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

vtv vitla

ಮುಂಬೈನ ಮಲಾಡ್‍ನ ಮಾಲ್ವಾನಿ ನಿವಾಸಿ ಜೆರೋನ್ ಡಿಸೋಜಾ ಅಂಧೇರಿ ಅವರಿಗೆ ಶಾಲಿನಿ ಎನ್ನುವ ಮಹಿಳೆಯ ಪರಿಚಯವಾಗಿದೆ. ಮದುವೆಯಾಗುತ್ತೇನೆ ವೃದ್ಧಾಪ್ಯದಲ್ಲಿ ನೋಡಿಕೊಳ್ಳುತ್ತೇನೆ ಎಂದು ಹೇಳಿ ನಂಬಿಸಿದ್ದಾಳೆ. ನಂತರ 1 ಕೋಟಿ ರೂಪಾಯಿಗಿಂತ ಹೆಚ್ಚು ಹಣವನ್ನು ಪಡೆದಿದ್ದಾಳೆ.

ಕೆಲವು ದಿನಗಳ ನಂತರ ಶಾಲಿನಿ, ಡಿಸೋಜಾ ಅವರ ಸಂಪರ್ಕಕ್ಕೆ ಸಿಗದೆ ಇದ್ದಾಗ ಅನುಮಾನ ಗೊಂಡು ವಿಚಾರಿಸಿದಾಗ ಹಣದೊಂದಿಗೆ ಆಕೆ ತನ್ನ ಹಳ್ಳಿಗೆ ಹೋಗಿ ಬೇರೊಬ್ಬರನ್ನು ಮದುವೆಯಾಗಿದ್ದಾಳೆ ಎಂದು ತಿಳಿದು ಬಂದಿದೆ. ಈ ವಿಚಾರವಾಗಿ ಡಿಸೋಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!