Friday, June 12, 2026
spot_imgspot_img
spot_imgspot_img

260 ಜನರು ಸಾವನ್ನಪ್ಪಿದ್ದ ಅಹಮದಾಬಾದ್ ಏರ್ ಇಂಡಿಯಾ ದುರಂತಕ್ಕೆ ಒಂದು ವರ್ಷ

- Advertisement -
- Advertisement -

ಅಹಮದಾಬಾದ್: 260 ಜನರ ಸಾವಿಗೆ ಕಾರಣವಾದ ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತ ನಡೆದು ಇಂದಿಗೆ 1 ವರ್ಷ ತುಂಬಿದೆ.

ಅಂದು 2025ರ ಜೂನ್ 12 (ಗುರುವಾರ). ಅಹಮಾದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ತೆರಳಲು 171 ಏರ್ ಇಂಡಿಯಾ ಟೇಕ್ ಆಫ್ ಆಗಿತ್ತು. ಮಧ್ಯಾಹ್ನ 1:38ಕ್ಕೆ ಅಹಮದಾಬಾದ್‌ನಿಂದ ಹೊರಟ 12 ವರ್ಷದ ಹಳೆಯ ಬೋಯಿಂಗ್ 787-8 ವಿಮಾನ 230 ಪ್ರಯಾಣಿಕರು ಹಾಗೂ 12 ಸಿಬ್ಬಂದಿಯನ್ನ ಹೊತ್ತೊಯ್ಯುತ್ತಿತ್ತು. ಆದರೆ ದುರಾದೃಷ್ಟವೆಂದರೆ ಟೇಕ್ ಆಫ್ ಕೆಲವೇ ಸೆಕೆಂಡುಗಳಲ್ಲಿಯೇ ಮೆಡಿಕಲ್ ಕಾಲೇಜಿನ ಹಾಸ್ಟೆಲ್‌ಗೆ ಅಪ್ಪಳಿಸಿ, ವಿಮಾನ ಅಪಘಾತಕ್ಕೀಡಾಯಿತು.

ದುರಂತದಲ್ಲಿ ಪೈಲಟ್ ಸೇರಿದಂತೆ ವಿಮಾನದಲ್ಲಿದ್ದ 241 ಮಂದಿ ಹಾಗೂ ಇತರ 19 ಜನರು ಸಾವನ್ನಪ್ಪಿದ್ದರು. ಘಟನೆ ನಡೆದು ವರ್ಷವಾದರೂ ಅಪಘಾತಕ್ಕೆ ನಿಖರ ಕಾರಣ ಏನು ಎಂಬುದರ ತನಿಖಾ ವರದಿ ಇನ್ನೂ ಸಿದ್ಧಗೊಂಡಿಲ್ಲ.

ಮಡಿದವರ ಕುಟುಂಬಗಳ ಪೈಕಿ ಶೇ.96ರಷ್ಟು ಕುಟುಂಬಗಳಿಗೆ ಇದುವರೆಗೆ ಮಧ್ಯಂತರ ಪರಿಹಾರವಾಗಿ ತಲಾ 25 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಈ ನಡುವೆ ವಿಮಾನ ಅಪಘಾತದಲ್ಲಿ ಮಡಿದವರಿಗೆ ಗೌರವ ಸಲ್ಲಿಸುವ ಸಲುವಾಗಿ ಏರ್ ಇಂಡಿಯಾ ಸಿಬ್ಬಂದಿ ಶುಕ್ರವಾರ ತಮ್ಮ ಕಾರ್ಯಸ್ಥಳಗಳಲ್ಲಿ ಮಧ್ಯಾಹ್ನ 1.39ರಿಂದ 1.41ರವರೆಗೆ ಎರಡು ನಿಮಿಷಗಳ ಮೌನಾಚರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!