Friday, June 19, 2026
spot_imgspot_img
spot_imgspot_img

ಕೂಲ್​ ಡ್ರಿಂಕ್​ ನಲ್ಲಿ ಮತ್ತು ಬರುವ ಮಾತ್ರೆಗಳನ್ನು ಹಾಕಿ ಯುವತಿಯ ಅತ್ಯಾಚಾರ!

- Advertisement -
- Advertisement -

ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ಮೂಲಕ ಪರಿಚಿತಳಾದ ಯುವತಿಯ ಮೇಲೆ ಅತ್ಯಾಚಾರ ಎಸೆಗಿದ ಘಟನೆ ಅಹಮದಾಬಾದ್​ನಲ್ಲಿ ನಡೆದಿದೆ.

ವೇಜಲ್ಪುರ್ ಪ್ರದೇಶದ ನಿವಾಸಿಯಾಗಿದ್ದ 22 ವರ್ಷದ ಯುವತಿ ಏರ್​ ಹೋಸ್ಟೆಸ್ ತರಬೇತಿ ಪಡೆಯುತ್ತಿದ್ದರು. ಯುವತಿಗೆ ಏಳು ತಿಂಗಳ ಹಿಂದೆ ಇನ್ಸ್ಟಾಗ್ರಾಮ್​ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಅಜಿತ್ ತ್ರಿವೇದಿ ಎಂಬವನ ಜೊತೆ ಫ್ರೆಂಡ್​ಶಿಪ್​ ಮಾಡಿಕೊಂಡಿದ್ದಳು. ಅಲ್ಲದೆ ಇಬ್ಬರೂ ಚಾಟ್​ ಮಾಡುತ್ತಾ ತುಂಬಾ ಆತ್ಮೀಯರಾಗಿದ್ದರು. ಇದೇ ವೇಳೆ ತಮ್ಮ ಫೋನ್ ನಂಬರ್​ ಅನ್ನು ವಿನಿಮಯ ಮಾಡಿಕೊಂಡಿದ್ದರು. ಬಳಿಕ ಇಬ್ಬರೂ ಭೇಟಿಯಾಗಲು ನಿರ್ಧರಿಸಿದ್ದರು.

ಅದರಂತೆ ಯುವತಿಯನ್ನು ಮನೆಗೆ ಕರೆಸಿಕೊಂಡಿದ್ದ ಅಜಿತ್, ಕೂಲ್​ ಡ್ರಿಂಕ್​ನಲ್ಲಿ ಮತ್ತು ಬರುವ ಮಾತ್ರೆಗಳನ್ನು ಹಾಕಿ ಯುವತಿಯನ್ನು ಪ್ರಜ್ಞಾ ಹೀನಳನ್ನಾಗಿಸಿದ್ದಾನೆ. ಅಷ್ಟೇ ಅಲ್ಲದೆ ಈ ವೇಳೆ ಅತ್ಯಾಚಾರ ಎಸೆಗಿ ಅದನ್ನು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಕೊಂಡಿದ್ದಾನೆ. ಈ ರೆಕಾರ್ಡ್ ವಿಡಿಯೋ ಇಟ್ಟುಕೊಂಡು ಆ ಬಳಿಕ ಕೂಡ ಅನೇಕ ಬಾರಿ ಲೈಂಗಿಕ ಶೋಷಣೆ ಮುಂದುವರೆಸಿದ್ದನು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಇನ್ನು ಸಂತ್ರಸ್ತೆ ಆತನ ಬೇಡಿಕೆಗಳಿಗೆ ಒಪ್ಪದಿದ್ದಾಗ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದನು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಇದೀಗ ಯುವತಿಯ ದೂರಿನ ಆಧಾರದ ಮೇಲೆ ಪೊಲೀಸರು ಅಜಿತ್ ತ್ರಿವೇದಿಯನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!