Thursday, July 23, 2026
spot_imgspot_img
spot_imgspot_img

AIADMKಗೆ ಮೂವರು ಶಾಸಕರು ರಾಜೀನಾಮೆ ನೀಡಿ TVKಗೆ ಸೇರ್ಪಡೆ

- Advertisement -
- Advertisement -

ಚೆನ್ನೈ: ಆಂತರಿಕ ಭಿನ್ನಾಭಿಪ್ರಾಯ ಮತ್ತು ಬಂಡಾಯ ರಾಜಕೀಯದಿಂದ ಕಂಗೆಟ್ಟಿರುವ AIADMKಗೆ ಮತ್ತೊಂದು ದೊಡ್ಡ ಹಿನ್ನಡೆ ಎದುರಾಗಿದೆ.

ಪಕ್ಷದ ಮೂವರು ಶಾಸಕರು ಸೋಮವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.ಮರಗತಮ್ ಕುಮಾರವೇಲ್, ಜಯಕುಮಾರ್ ಮತ್ತು ಸತ್ಯಬಾಮ ಅವರು ತಮ್ಮ ರಾಜೀನಾಮೆ ಪತ್ರಗಳನ್ನು ವಿಧಾನಸಭೆ ಸ್ಪೀಕರ್ ಜೆಸಿಡಿ ಪ್ರಭಾಕರ್ ಅವರಿಗೆ ಸಲ್ಲಿಸಿದ್ದು, ಸ್ಪೀಕರ್ ಅವುಗಳನ್ನು ಅಂಗೀಕರಿಸಿದ್ದಾರೆ.

ಇದಕ್ಕೂ ಮುನ್ನ ಪಕ್ಷದ ಹಿರಿಯ ನಾಯಕ ಸಿವಿ ಷಣ್ಮುಗಂ ನೇತೃತ್ವದಲ್ಲಿ 30 ಎಐಎಡಿಎಂಕೆ ಶಾಸಕರು ವಿಜಯ್ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದರು. ಇದೀಗ ರಾಜೀನಾಮೆ ನೀಡಿರುವ ಮೂವರು ಶಾಸಕರೂ ಅದೇ ಬಂಡಾಯ ಬಣದ ಭಾಗವಾಗಿದ್ದರು.

- Advertisement -

Related news

error: Content is protected !!