Friday, April 19, 2024
spot_imgspot_img
spot_imgspot_img

ಹಮಾಸ್ ನೆಲೆಗಳನ್ನು ಗುರಿಯಿರಿಸಿ ವಾಯುದಾಳಿ

- Advertisement -G L Acharya panikkar
- Advertisement -

ಜೆರುಸಲೇಂ: ಇಸ್ರೇಲಿ ಸೇನೆಯು ಗಾಝಾಪಟ್ಟಿ ಪ್ರದೇಶದಲ್ಲಿರುವ ಹಮಾಸ್ ನೆಲೆಗಳನ್ನು ಗುರಿಯಿರಿಸಿ ವಾಯುದಾಳಿ ನಡೆಸಿದೆ.
ಫೆಲೆಸ್ತೀನ್ ಪ್ರಾಂತದಿಂದ ಎರಡು ರಾಕೆಟ್‌ಗಳು ಇಸ್ರೇಲ್ ಪ್ರದೇಶಗಳಿಗೆ ಅಪ್ಪಳಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ. ಇಸ್ರೇಲಿ ಫೈಟರ್ ಜೆಟ್‌ಗಳು, ಅಟ್ಯಾಕ್ ಹೆಲಿಕಾಪ್ಟರ್‌ಗಳು ಹಾಗೂ ಟ್ಯಾಂಕ್‌ಗಳು, ಹಮಾಸ್‌ನ ಭೂಗತ ಮೂಲಸೌಕರ್ಯಗಳು ಹಾಗೂ ಸೇನಾ ಠಾಣೆಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.


ಇಸ್ರೇಲ್ ಮೇಲೆ ಹಮಸ್ ಹೋರಾಟಗಾರರು ಎರಡು ರಾಕೆಟ್‌ಗಳನ್ನು ಎಸೆದಿದ್ದು, ಅವುಗಳಲ್ಲಿ ಒಂದು ದಕ್ಷಿಣ ಇಸ್ರೇಲ್‌ನ ಆಯಶ್‌ಡೊಡ್ ಪಟ್ಟಣದ ಮೇಲೆ ಅಪ್ಪಳಿಸಿತ್ತು. ಇನ್ನೊಂದು ಕ್ಷಿಪಣಿಯು ಮಧ್ಯ ಇಸ್ರೇಲ್ ಮೇಲೆ ಬಿದ್ದಿತ್ತು.


2007ರಿಂದೀಚೆಗೆ ಇಸ್ರೇಲ್ ಹಾಗೂ ಹಮಾಸ್ ನಡುವೆ ಮೂರು ಯುದ್ಧಗಳು ನಡೆದಿವೆ. ಎಲ್ಲಾ ದಾಳಿಗಳಿಗೂ ಇಸ್ರೇಲ್, ಹಮಾಸ್ ಸಂಘಟನೆಯನ್ನೇ ಹೊಣೆಗಾರನನ್ನಾಗಿ ಮಾಡುತ್ತಿದೆ. ಪ್ರತೀಕಾರವಾಗಿ ಗಾಝಾದಲ್ಲಿರುವ ಹಮಾಸ್ ನೆಲೆಗಳ ಮೇಲೆ ವಾಯುದಾಳಿ ನಡೆಸಿದೆ.

- Advertisement -

Related news

error: Content is protected !!