Saturday, April 27, 2024
spot_imgspot_img
spot_imgspot_img

ಅಜ್ಜಿನಡ್ಕ: ಕ್ಲಸ್ಟರ್ ಹಂತದ ಸ್ಪೋಕನ್ ಇಂಗ್ಲೀಷ್ ಹಬ್ಬ

- Advertisement -G L Acharya panikkar
- Advertisement -

ಅಜ್ಜಿನಡ್ಕ: ಕ್ಲಸ್ಟರ್ ಹಂತದ ಸ್ಪೋಕನ್ ಇಂಗ್ಲೀಷ್ ಹಬ್ಬವು ತೋರಣಕಟ್ಟೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಕ್ಲಸ್ಟರ್‌ನ ಆರು ಸರ್ಕಾರಿ ಶಾಲೆಗಳ ಮಕ್ಕಳು ಇಂಗ್ಲಿಷ್ ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಬಳಿಕ ಸಮಾರೋಪ ಸಮಾರಂಭದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಯಶೋಧ ಯಾನೆ ಬೇಬಿ, ಸದಸ್ಯರಾದ ಶ್ರೀಮತಿ ರೇಖಾ , ಡಿ ಡಿ ಪಿ ಏ ಮತ್ತು ಡಯಟ್ ಪ್ರಾಂಶುಪಾಲರದ ಶ್ರೀಮತಿ ರಾಜಲಕ್ಷ್ಮಿ, ಡಯಟ್ ಉಪನ್ಯಾಸಕರಾದ ಶ್ರೀಮತಿ ಫಾತಿಮಾ ಮತ್ತು ಶ್ರೀಮತಿ ಗೀತಾ ಶೆಟ್ಟಿ ಭಾಗವಹಿಸಿದ್ದರು.

ಸ್ಪೋಕನ್ ಇಂಗ್ಲೀಷ್ ಚಟುವಟಿಕೆಗಳನ್ನು ನಡೆಸಿಕೊಟ್ಟ ಮಕ್ಕಳಿಗೆ ಪಂಚಾಯತ್ ವತಿಯಿಂದ ಬಹುಮಾನ ನೀಡಲಾಯಿತು. ತೋರಣಕಟ್ಟೆ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಲೀಲಾವತಿ ಸ್ವಾಗತಿಸಿದರು. ಕೃಷ್ಣಗಿರಿ ಶಾಲೆಯ ಶಿಕ್ಷಕಿ ವರದಕ್ಷಿ ಕಾರ್ಯಕ್ರಮ ನಿರೂಪಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಪುಷ್ಪ ಬಲ್ಲಾಳ್ ಧನ್ಯವಾದ ಸಮರ್ಪಣೆಗೈದರು. ಭಾಗವಹಿಸಿದ ಎಲ್ಲಾ ಅಧಿಕಾರಿ ವೃಂದದವರು ವಿದ್ಯಾರ್ಥಿಗಳ ಪ್ರತಿಭೆಯನ್ನು ಮೆಚ್ಚಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

- Advertisement -

Related news

error: Content is protected !!