ಆಸೆಗಳು ಮನುಷ್ಯನನ್ನು ನಿಯಂತ್ರಿಸುವುದಲ್ಲ; ಮಾನವ ಆಸೆಗಳನ್ನು ನಿಯಂತ್ರಿಸಬೇಕು – ಗಣೇಶೋತ್ಸವದ ಆಶಯ: ಕು. ಅಕ್ಷಯ ಗೋಖಲೆ





ಅಳಿಕೆ: ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಆಶ್ರಯದಲ್ಲಿ ಶ್ರೀ ವಿದ್ಯಾಗಣಪತಿ ಮಹೋತ್ಸವವು ಆ.27-08-2025ನೇ ಬುಧವಾರ 29-08-2025ನೇ ಶುಕ್ರವಾರ ಶ್ರೀ ಸತ್ಯಸಾಯಿ ಪ್ರಾರ್ಥನಾ ಮಂದಿರದಲ್ಲಿ ನಡೆಯಲಿದ್ದು, ಇಂದು ದಿನಾಂಕ : 27-08-2025 ರಂದು ಅಪರಾಹ್ನ ಸಭಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕು. ಅಕ್ಷಯ ಗೋಖಲೆರವರು ಮಾತನಾಡಿ ಆಸೆಗಳು ಮನುಷ್ಯನನ್ನು ನಿಯಂತ್ರಿಸುವುದಲ್ಲ; ಮಾನವ ಆಸೆಗಳನ್ನು ನಿಯಂತ್ರಿಸಬೇಕು – ಗಣೇಶೋತ್ಸವದ ಆಶಯ. ಗಣೇಶನ ದೇಹದ ವಿವಿಧ ಭಾಗಗಳ ಮಹತ್ವವನ್ನು ಪುನರುಚ್ಛರಿಸಿದರು. ಒಳ್ಳೆಯ ವಿಷಯಗಳನ್ನು ಕೇಳಿ ಮನನ ಮಾಡಿಕೊಳ್ಳಲು ಗಣಪತಿಗೆ ದೊಡ್ಡ ಕಿವಿಗಳಿವೆ, ಎಲ್ಲಾ ರೀತಿಯ ಪ್ರಶಂಸೆಗಳು ಹಾಗು ಅಪಾದನೆಗಳನ್ನು ಸಮನಾಗಿ ಸ್ವೀಕರಿಸಲು ದೊಡ್ಡ ಹೊಟ್ಟೆಯಿದೆ ಎಂದರು.

ಅಪರಾಹ್ನದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಶಿವಸಾಗರ್, ತೇಜಸ್ ಎಂ.ಎಸ್. ಗಣಪತಿಯ ಮಹತ್ವದ ಬಗ್ಗೆ ಮಾತನಾಡಿದರು. ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿದ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ಸಂಚಾಲಕ, ಟ್ರಸ್ಟಿನ ಕಾರ್ಯದರ್ಶಿಯಾದ ಚಂದ್ರಶೇಖರ ಭಟ್‌ಗಣಪತಿಯ ಆಶೀರ್ವಾದ ಪಡೆಯಲು ಶ್ರದ್ಧೆ, ಪರಿಶ್ರಮ ಅಗತ್ಯವೆಂದರು. ಇನ್ನೋರ್ವ ಅತಿಥಿಯಾದ ಡಾ. ಭರತ್ ಹೊಳ್ಳ ಮಕ್ಕಳಲ್ಲಿ ಮಿದುಳಿನ ಕ್ರಿಯೆಗಳ ಬಗೆಗೆ ವಿವರಿಸಿದರು. ಭಕ್ತಿ, ಜ್ಞಾನ, ಹಾಗು ಕರ್ಮಮಾರ್ಗಗಳ ಮೂಲಕ ಮನೋನಿಗ್ರಹದ ಬಗ್ಗೆ ಬೆಳಕು ಚೆಲ್ಲಿದರು. ತಮ್ಮ ಅಧ್ಯಕ್ಷೀಯ ಸ್ಥಾನದಲ್ಲಿ ಕೆ.ಎಸ್. ಕೃಷ್ಣ ಭಟ್ ಗಣೇಶೋತ್ಸವದ ಶುಭಾಶಯ ಕೋರಿ ಆಶೀರ್ವಚನ ನೀಡಿದರು.
ಇನ್ನೋರ್ವ ಅತಿಥಿ ಡಾ. ಮನುಶಶಾಂಕ್ ಉಪಸ್ಥಿತರಿದ್ದರು. ಶ್ರೀಸತ್ಯಸಾಯಿ ಲೋಕಸೇವಾಪ.ಪೂ. ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕ ಅನಂತಪ್ರಸಾದ್ ಬಿ. ಸ್ವಾಗತಿಸಿದರು. ಪ.ಪೂ. ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕಿ ಅಮೃತಾ ಎಂ. ನಿರೂಪಿಸಿದರು. ಟ್ರಸ್ಟಿನ ಆಡಳಿತಾಧಿಕಾರಿ ಜನಾರ್ದನ ನಾಯಕ್ ಯಸ್. ವಂದಿಸಿದರು.








