Monday, June 15, 2026
spot_imgspot_img
spot_imgspot_img

ಮಹಿಳೆ ಜೊತೆಗೆ ಅನುಚಿತ ವರ್ತನೆ ಆರೋಪ: ಹಾಸ್ಯನಟ ಶಿವರಾಜ್ ಕೆ.ಆರ್ ಪೇಟೆ ವಿರುದ್ಧ ದೂರು

- Advertisement -
- Advertisement -

ಕನ್ನಡದ ಹೆಸರಾಂತ ಕಾಮಿಡಿ ಕಲಾವಿದ ಶಿವರಾಜ್ ಕೆ.ಆರ್ ಪೇಟೆ ವಿರುದ್ಧ ಬೆಂಗಳೂರು , ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಾರದಾ ಬಾಯಿ ಎಂಬ ಮಹಿಳೆಗೆ ಶಿವರಾಜ್ ಕೆ.ಆರ್ ಪೇಟೆ ಅವಾಚ್ಯ ಪದದಿಂದ ನಿಂದಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಹಿಳೆಯೊಬ್ಬರು ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಶಿವರಾಜ್ ಕೆ ಆರ್ ಪೇಟೆ ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತನ್ನ‌ ಸ್ಕೂಟರ್ ಗೆ ಕಾರು ಟಚ್ ಮಾಡಿ ನನಗೆ ನಿಂದಿಸಿದ್ದಾರೆ. ಅಲ್ಲದೇ ಸ್ನೇಹಿತರ ಜೊತೆ ಸೇರಿ ನನಗೆ ಬೈದಿದ್ದಾರೆ ಎಂದು ಮಹಿಳೆ ಆರೋಪಿಸಿ ದೂರು ದಾಖಲಿಸಿದ್ದಾರೆ. ಶಾರದಾ ಬಾಯಿ ಎಂಬ ಮಹಿಳೆ ದೂರು ನೀಡಿದ್ದು, ಶಿವರಾಜ್ ಕೆ.ಆರ್ ಪೇಟೆ ಮತ್ತು ಆತನ ಗೆಳೆಯರು ಕಾರಿನಲ್ಲಿ ಇದ್ದರು. ಎಲ್ಲರೂ ನನಗೆ ಅವಮಾನ ಮಾಡಿದ್ದಾರೆ. ಹಾಗಾಗಿ ಅವರನ್ನು ಠಾಣೆಗೆ ಕರೆದು, ಸೂಕ್ತ ಕ್ರಮ ತಗೆದುಕೊಳ್ಳುವಂತೆ ಮಹಿಳೆ ಕೋರಿದ್ದಾರೆ.

- Advertisement -

Related news

error: Content is protected !!