Tuesday, June 9, 2026
spot_imgspot_img
spot_imgspot_img

ದೂರು ಹಿಂಪಡೆಯುವಂತೆ ಸ್ನೇಹಮಯಿ ಕೃಷ್ಣಗೆ ಆಮಿಷ ಆರೋಪ; ದೂರು ದಾಖಲು..!

- Advertisement -
- Advertisement -

ನವದೆಹಲಿ: ಮೈಸೂರು, ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆದಿದ್ದ 14 ನಿವೇಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ತಿರುವು ದೊರೆತಿದೆ. ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣಗೆ ತಮ್ಮ ಹೋರಾಟ ನಿಲ್ಲಿಸಲು, ದೂರು ಹಿಂಪಡೆಯಲು ಹಣಕಾಸಿನ ಆಮಿಷ ಒಡ್ಡಲಾಗಿದೆ ಎಂಬ ಆರೋಪ ಮಾಡಲಾಗಿದೆ.

ಸಿಎಂ ಪತ್ನಿ ಪಾರ್ವತಿ ಆಪ್ತ ಸಹಾಯಕನ ಹೆಸರಿನಲ್ಲಿ ತಮಗೆ ಆಮಿಷ ಒಡ್ಡಲಾಗಿದೆ ಎಂದು ಸ್ನೇಹಮಯಿ ಕೃಷ್ಣ ಅವರು ಆರೋಪಿಸಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆ ಒಳಪಡಿಸುವ ಅರ್ಜಿಯನ್ನು ವಾಪಸ್ ಪಡೆಯಲು ಹಣದ ಆಮಿಷ ಒಡ್ಡಲಾಗಿದೆ. ಪತ್ರಕರ್ತನೊಬ್ಬನೊಂದಿಗೆ ಬಂದು ವ್ಯವಹಾರ ಕುದುರಿಸಲು ನೋಡಿದ್ದು ಇದಕ್ಕೆ ಸ್ನೇಹಮಯಿ ಕೃಷ್ಣ ಒಪ್ಪದ ಕಾರಣ ಅವರ ಪತ್ನಿ ಹಾಗೂ ಮಗನ ಕಡೆಯಿಂದಲೂ ಒತ್ತಡ ಹಾಕಿಸಲು ಯತ್ನಿಸಿದ್ದಾರೆಂಬ ಆರೋಪ ಕೇಳಿಬಂದಿದೆ.

ಮೈಸೂರಿನ ಬಿಜೆಪಿ ಮುಖಂಡ ಹರ್ಷ ತಾನು ಪಾರ್ವತಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡು, ಮೈಸೂರಿನ ಸ್ಥಳೀಯ ವಾಹಿನಿಯ ಪತ್ರಕರ್ತ ಶ್ರೀನಿಧಿ ಅವರೊಂದಿಗೆ ಸ್ನೇಹಮಹಿ ಕೃಷ್ಣ ಅವರಲ್ಲಿ ಬಂದಿದ್ದಾರೆ. ಹೀಗಾಗಿ ಸ್ನೇಹಮಯಿ ಕೃಷ್ಣ ಅವರು ಸಿಸಿಟಿವಿ ದೃಶ್ಯ ಸೇರಿದಂತೆ ಫೋನ್ ಕರೆ ಮಾಡಿರುವ ಸಾಕ್ಷಿಯನ್ನು ಪೊಲೀಸರಿಗೆ ನೀಡಿ ಇವರಿಬ್ಬರ ವಿರುದ್ಧ ದೂರು ನೀಡಿದ್ದಾರೆ.

- Advertisement -

Related news

error: Content is protected !!