- Advertisement -
- Advertisement -
ಮೂಡಬಿದಿರೆ: ಜಪಾನ್ ಟೋಕಿಯೋ ಒಲಿಂಪಿಕ್ಸ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಆಳ್ವಾಸ್ ಪ್ರತಿಷ್ಠಾನದ ಇಬ್ಬರು ಮಾಜಿ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.

ಧನಲಕ್ಷ್ಮೀ ಹಾಗೂ ಶುಭಾ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ವಿದ್ಯಾರ್ಥಿಗಳಾಗಿದ್ದಾರೆ. ಭಾರತ ತಂಡದ 4×400 ಮೀಟರ್ ಮಿಕ್ಸೆಡ್ ರಿಲೇ ತಂಡವನ್ನು ಪ್ರತಿನಿಧಿಸಲಿದ್ದಾರೆ. 2016-17ನೇ ಶೈಕ್ಷಣಿಕ ವರ್ಷದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಾಗಿದ್ದ ಇಬ್ಬರು, ಮೂಲತಃ ತಮಿಳುನಾಡಿನ ತಿರುಚಿ ಮೂಲದವರು.

ಒಲಿಂಪಿಕ್ಸ್ ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಲಾ 1 ಲಕ್ಷ ರೂಪಾಯಿ ಪ್ರೋತ್ಸಾಹ ಧನವನ್ನ ಆಳ್ವಾಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವಾ ಘೋಷಿಸಿದ್ದಾರೆ.

ಆಳ್ವಾಸ್ ವಿದ್ಯಾಸಂಸ್ಥೆಯ ಹಲವಾರು ಕ್ರೀಡಾ ವಿದ್ಯಾರ್ಥಿಗಳು ಈಗಾಗಲೇ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಸಾಧನೆ ಮಾಡಿದ್ದಾರೆ. ಅವರ ಸಾಲಿನಲ್ಲಿ ಇದೀಗ ಧನಲಕ್ಷ್ಮೀ ಹಾಗೂ ಶುಭಾ ಕೂಡ ಸೇರಿದ್ದಾರೆ. ಅಂದಾಗೆ ಒಲಿಂಪಿಕ್ಸ್ ಜುಲೈ 23 ರಿಂದ ಆಗಸ್ಟ್ 28 ವರೆಗೆ ನಡೆಯಲಿದೆ.


- Advertisement -








