- Advertisement -
- Advertisement -





ಪುತ್ತೂರು: ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ವಿದ್ಯಾಭಾರತಿ ಕರಾಟೆ ಪಂದ್ಯಾಟದಲ್ಲಿ ಪುತ್ತೂರಿನ ಅಂಬಿಕಾ ಶಾಲೆಯ ವಿದ್ಯಾರ್ಥಿನಿ ನಿಹಾರಿಕಾ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪುತ್ತೂರು ನಿವಾಸಿಗಳಾದ ಶ್ರೀಮತಿ ವಿದ್ಯಾ ಮತ್ತು ಸುನಿಲ್ ದಂಪತಿಗಳ ಪುತ್ರಿಯಾಗಿರುವ ನಿಹಾರಿಕಾ, ಅಂಬಿಕಾ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿ.
ಇವರಿಗೆ ಶಿಹಾನ್ ಮಾಧವ ಅಳಿಕೆ ಅವರ ಮಾರ್ಗದರ್ಶನದಲ್ಲಿ ರೋಹಿತ್ ಎಸ್.ಎನ್, ನಿಖಿಲ್ ಕೆ.ಟಿ, ಸುಧೀನ್ ಆಚಾರ್, ಭವಿಷ್ ಸಿಂಹಮೂಲ್ಯ ಅವರು ತರಬೇತಿ ನೀಡಿದ್ದಾರೆ.
- Advertisement -








