Friday, April 26, 2024
spot_imgspot_img
spot_imgspot_img

108 ಆಂಬುಲೆನ್ಸ್ ನ ಟೈರ್ ಪಂಕ್ಚರ್: ಮಾರ್ಗ ಮಧ್ಯದಲ್ಲೇ ರೋಗಿ ಸಾವು!

- Advertisement -G L Acharya panikkar
- Advertisement -

ಮಹಾರಾಷ್ಟ್ರ: 108 ಆಂಬುಲೆನ್ಸ್ ನ ಟೈರ್ ಪಂಕ್ಚರ್ ಆದ ಪರಿಣಾಮ ಮಾರ್ಗ ಮಧ್ಯದಲ್ಲೇ ರೋಗಿಯೊಬ್ಬರು ಮೃತಪಟ್ಟ ಘಟನೆ ಮಹಾರಾಷ್ಟ್ರದ ಅಕೋಲದಲ್ಲಿ ನಡೆದಿದೆ.

19 ವರ್ಷದ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಕೋತ್ನಿಂದ ಅಕೋಲ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆ ಆಂಬುಲೆನ್ಸ್‌ನ ಹಿಂದಿನ ಚಕ್ರ ಪಂಕ್ಚರ್ ಆಗಿದೆ. ಅಲ್ಲದೆ ಆಂಬುಲೆನ್ಸ್‌ನಲ್ಲಿ ಮತ್ತೊಂದು ಚಕ್ರ(ಸ್ಟೆಪ್ನಿ) ಕೂಡ ಇರಲಿಲ್ಲ. ಹೀಗಾಗಿ ಯುವಕ ರೋಶನ್ ಗೆ ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾನೆ.

ಪಂಕ್ಚರ್ ಆದ ಹಿನ್ನೆಲೆ ಯುವಕನ ಕಡೆಯವರು ಮತ್ತೊಂದು ಆ್ಯಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ಅಕೋತ್ನಿಂದ ಆ್ಯಂಬ್ಯುಲೆನ್ಸ್ ಬರುವುದಕ್ಕೆ ಸುಮಾರು 2 ತಾಸು ತಡವಾಗಿದೆ. ಆದರೆ ಆ ವೇಳೆಗಾಗಲೇ ಯುವಕ ರೋಶನ್ ಚಿಕಿತ್ಸೆ ಸಿಗದೆ ಕೊನೆಯುಸಿರೆಳೆದಿದ್ದಾನೆ.

- Advertisement -

Related news

error: Content is protected !!