Sunday, May 5, 2024
spot_imgspot_img
spot_imgspot_img

*ಗೆಲುವಿನತ್ತ ಬೈಡನ್; ಅಮೆರಿಕಾದಾದ್ಯಂತ ವ್ಯಾಪಕ ಬಂದೋಬಸ್ತ್*

- Advertisement -G L Acharya panikkar
- Advertisement -

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ ಗೆಲುವಿನತ್ತ ದಾಪುಗಾಲು ಹಾಕಿದ್ದು, ಡೊನಾಲ್ಡ್ ಟ್ರಂಪ್ ಗೆಲುವಿನ ಆಸೆ ಭಗ್ನಗೊಂಡಿದೆ.

ಅಧಿಕೃತ ಫಲಿತಾಂಶ ಪ್ರಕಟಗೊಂಡ ನಂತರ ಅಮೆರಿಕದ ವಿವಿಧೆಡೆ ಗಲಭೆ ಮತ್ತು ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಬಗ್ಗೆ ಗುಪ್ತಚರ ಇಲಾಖೆಗಳು ಸುಳಿವು ನೀಡಿವೆ. ಈ ಹಿನ್ನೆಲೆಯಲ್ಲಿ ರಾಜಧಾನಿ ವಾಷಿಂಗ್ಟನ್, ನ್ಯೂಯಾರ್ಕ್ ಸೇರಿದಂತೆ ಅಮೆರಿಕಾದ 50 ಪ್ರಾಂತ್ಯಗಳಾದ್ಯಂತ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.

ಸದ್ಯ ಡೆಮಾಕ್ರೆಟಿಕ್ ಪಕ್ಷದ ಬೈಡನ್ ಒಟ್ಟು 538ರಲ್ಲಿ 253 ಎಲೆಕ್ಟೋರಲ್ ವೋಟ್ಸ್​ ತಮ್ಮದಾಗಿಸಿಕೊಂಡಿದ್ದಾರೆ. ರಿಪಬ್ಲಿಕನ್ ಪಕ್ಷದ ಟ್ರಂಪ್ 214 ಎಲೆಕ್ಟೋರಲ್ ವೋಟ್ಸ್​ ಪಡೆದಿದ್ದಾರೆ. ಪೆನಿಸಿಲ್ವೇನಿಯಾದಲ್ಲೂ ಬೈಡನ್ 20 ಎಲೆಕ್ಟೋರಲ್ ವೋಟ್ಸ್​ ಪಡೆಯುವ ಸಾಧ್ಯತೆ ಇದ್ದು, ಈ ಮೂಲಕ ಗೆಲಿವಿಗೆ ಬೇಕಾದ 270 ಎಲೆಕ್ಟೋರಲ್ ವೋಟ್ಸ್​ ಅವರದ್ದಾಗಲಿದೆ ಎಂದು ವರದಿಯಾಗಿದೆ.

- Advertisement -

Related news

error: Content is protected !!