Saturday, April 27, 2024
spot_imgspot_img
spot_imgspot_img

ಮೊಮ್ಮಕ್ಕಳ ಎದುರೇ ಅಜ್ಜ ಅಜ್ಜಿಯ ವಿಶೇಷ ಮದುವೆ..! ಆಮಂತ್ರಣ ಪತ್ರ ಮುದ್ರಿಸಿ, ಮಂಗಳವಾದ್ಯ ಊದಿಸಿದ ಪ್ರೀತಿಯ ಮಕ್ಕಳು

- Advertisement -G L Acharya panikkar
- Advertisement -

ಲಖನೌ: ಇವರಿಬ್ಬರದ್ದು 28 ವರ್ಷಗಳ ಪ್ರೀತಿ. 2 ಹೆಣ್ಣು ಮಕ್ಕಳೂ ಇದ್ದಾರೆ. ಆದರೆ ಮದುವೆ ಮಾತ್ರ ಆಗಿಲ್ಲ. ಕಾಲ ಬಂದಾಗ ಕಂಕಣ ಭಾಗ್ಯ ಅನ್ನುವ ಹಾಗೇ ಈ ಜೋಡಿಗಳಿಗೆ ಈ ಮದುವೆ ಭಾಗ್ಯ ಬಂದಿದೆ. 28 ವರ್ಷಗಳಿಂದ ಒಟ್ಟಿಗೆ ಇರುವ ಈ ಪ್ರೇಮಿಗಳು ಇದೀಗ ಮೊಮ್ಮಕ್ಕಳು ಹುಟ್ಟಿದ ನಂತರ ಮದುವೆಯಾಗಿದ್ದಾರೆ.

ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯಲ್ಲಿ ಇಂತದ್ದೊಂದು ವಿಶೇಷ ಮದುವೆಯಾಗಿದೆ. 65 ವರ್ಷದ ಮೋತಿಲಾಲ್ ಮತ್ತು 60 ವರ್ಷದ ಮೋಹಿನಿ ದೇವಿ ಭಾನುವಾರ ಸಂಜೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೋತಿಲಾಲ್ 28 ವರ್ಷಗಳ ಹಿಂದೆಯೇ ಮೋಹಿನಿಯನ್ನು ಪ್ರೀತಿಸಿ, ತನ್ನೊಂದಿಗೆ ಕರೆತಂದಿದ್ದಾರೆ. ನಂತರ ಸಂಸಾರ ನೌಕೆಯ ಪ್ರಯಾಣ ಶುರುಮಾಡಿದ್ದಾರೆ. ಆದರೆ ಮದುವೆಯಾಗಬೇಕೆಂದು ಅನಿಸಲೇ ಇಲ್ಲ.

ಮದುವೆ ಆಗದೇ ಇದ್ದರೂ ಇವರದ್ದು ಸುಖೀ ಸಂಸಾರ. ನಂತರ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದ್ದು, ಅವರ ಲಾಲನೆ ಪಾಲನೆಯಲ್ಲೇ ಸಮಯ ಕಳೆದಿದ್ದು, ಮದುವೆ ಮರೆತಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟ ಈ ಜೋಡಿಗೆ ಈಗಾಗಲೇ ಮೊಮ್ಮಕ್ಕಳೂ ಇದ್ದಾರೆ. ಆದರೆ ಅವರಿಬ್ಬರ ಮದುವೆ ಕನಸು ಮಾತ್ರ ಇನ್ನೂ ಈಡೇರಿರಲಿಲ್ಲ.

ಅಮ್ಮನಿಗೆ ಮದುವೆಯಾಗಬೇಕೆಂಬ ಆಸೆ ಇದೆ ಎನ್ನುವುದನ್ನು ಅರಿತಿದ್ದ ಹೆಣ್ಣು ಮಕ್ಕಳು ಅಪ್ಪ ಅಮ್ಮನಿಗೆ ಮದುವೆ ಮಾಡಿಸುವ ನಿರ್ಧಾರ ಮಾಡಿದ್ದಾರೆ. ಮುಹೂರ್ತ ನಿಶ್ಚಯಿಸಿ, ಆಮಂತ್ರಣ ಪತ್ರ ಮುದ್ರಿಸಿ, ಬಂಧುಗಳು ಹಾಗೂ ಗ್ರಾಮಸ್ಥರಿಗೆ ಹಂಚಲಾಗಿದೆ. ಶುಭ ಮುಹೂರ್ತದಲ್ಲಿ ಮೋತಿಲಾಲ್, ಮೋಹಿನಿಯ ಕೊರಳಿಗೆ ತಾಳಿ ಕಟ್ಟಿದ್ದಾನೆ. ಮಕ್ಕಳು, ಮೊಮ್ಮಕ್ಕಳು ಹಾಗೂ ಬಂಧುಗಳು ಅಕ್ಷತೆ ಹಾಕಿ ಶುಭ ಹಾರೈಸಿದ್ದಾರೆ. ಮದುವೆಯಲ್ಲಿ ಮಂಗಳವಾದ್ಯಗಳ ಜತೆ ನೃತ್ಯವನ್ನೂ ಆಯೋಜಿಸಿದ್ದಾಗಿ ಹೇಳಲಾಗಿದೆ.

- Advertisement -

Related news

error: Content is protected !!