ಸಿನಿಮಾ ಸೀರಿಯಲ್ ಗಳಲ್ಲಿ ಹೆಣ್ಣಿನ ಪಾತ್ರ ಮಾಡುತ್ತಾ ಹಲವು ಯುವಕರ ನಿದ್ದೆಗೆಡಿಸಿದ ಪಿಂಕಿ ಆಲಿಯಾಸ್ ಸಾಯಿತೇಜ್, ಪ್ರಿಯಾಂಕ ಸಿಂಗ್ ಆಗಿ ಬದಲಾಗಿದ್ದಾನೆ.
ಸಾಯಿ ತೇಜ್ ಹುಟ್ಟಿದ್ದು, ಬೆಳೆದಿದ್ದು ಗಂಡಾಗಿ.ಸಿನಿಮಾ ಸೀರಿಯಲ್ ಗಳಲ್ಲಿ ಹೆಣ್ಣಿನ ಪಾತ್ರ ಮಾಡುತ್ತಾ ನಂತರದಲ್ಲಿ ಹೆಣ್ಣಾಗಿ ಬದಲಾಗಿದ್ದಾರೆ. ಹೈದರಾಬಾದ್ನಲ್ಲಿ ಹುಟ್ಟಿದ ಸಾಯಿ ತೇಜ್ ಸಣ್ಣವನಿದ್ದಾಗಲೇ ಹೆಣ್ಮಕ್ಕಳೊಂದಿಗೆ ಹೆಚ್ಚು ಬೆರೆಯುತ್ತಿದ್ದರು.
2013 ರಲ್ಲಿ ತೆಲುಗಿನ ಖ್ಯಾತ ಕಿರುತೆರೆ ಶೋ ಜಬರ್ದಸ್ತ್ ಮೂಲಕ ಪ್ರೇಕ್ಷಕರಿಗೆ ಪರಿಚಯವಾದರು. ಆದರೆ ಇಲ್ಲಿ ಸಾಯಿತೇಜ್ ಗೆ ತನ್ನ ಪ್ರತಿಭೆ ತೋರಿಸಲು ಸಿಕ್ಕ ಅವಕಾಶ ಹೆಣ್ಣಿನ ರೋಲ್. ಇದು ಸಾಯಿತೇಜ್ ಬದುಕಿನ ತಿರುವನ್ನೇ ಬದಲಾಯಿಸಿತು.
ಸಾಯಿ ತಮ್ಮ ಶೋಗಾಗಿ ಮಾಡಿದ ಲೇಡಿ ಗೆಟಪ್ನಲ್ಲಿಯೇ ರೀಲ್ಸ್ ಮಾಡಿ ಶೇರ್ ಮಾಡುತ್ತಿದ್ದರು. ಇದಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿತ್ತು. 2015ರಲ್ಲಿ 20 ವರ್ಷದ ಸಾಯಿ ತೇಜ್ ಕೊನೆಗೂ ಲಿಂಗ ಪರಿವರ್ತನೆ ಮಾಡುವ ನಿರ್ಧಾರಕ್ಕೆ ಬಂದಿದ್ದರು.
ಸರ್ಜರಿಗೆ 3 ದಿನ ಮೊದಲು ಸ್ನೇಹಿತರಿಗೆ ವಿಷಯ ಹೇಳಿದ್ದರು. ಅವರೆಲ್ಲ ಸಾಯಿ ತೇಜ್ ಮನಸು ಬದಲಾಯಿಸಲು ಪ್ರಯತ್ನಿಸಿದರು. ಆದರೆ ಇದು ವರ್ಕೌಟ್ ಆಗಲಿಲ್ಲ. ಹೆಣ್ಣಾಗಿ ಬದಲಾಗುವ ಸಾಯಿ ತೇಜ್ ನಿರ್ಧಾರ ಕೇಳಿ ಎಲ್ಲರೂ ಶಾಕ್ ಆಗಿದ್ದರು. ದೇಸಿ ಗರ್ಲ್ ಪ್ರಿಯಾಂಕಾ ಫ್ಯಾನ್ ಆದ ಕಾರಣ ಸಾಯಿ ತೇಜ್ ಪ್ರಿಯಾಂಕ ಸಿಂಗ್ ಎಂದು ಹೆಸರು ಬದಲಾಯಿಸಿದ್ದು ಅವರು ಪಿಂಕಿ ಎಂದೇ ಫೇಮಸ್.
ಬಾಲಕೃಷ್ಣುಡು, ಮನಸ್ಯನೊಡು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಈ ಬ್ಯೂಟಿ ನಂತರ ಅದಿರಿಂದಿ ರಿಯಾಲಿಟಿ ಶೋನಲ್ಲಿಯೂ ನಟಿಸಿ ವ್ಯಾಪಕ ಮೆಚ್ಚುಗೆ ಗಳಿಸಿದರು. 2021ರಲ್ಲಿ ತೆಲುಗು ಬಿಗ್ಬಾಸ್ 5ನೇ ಸೀಸನ್ನಲ್ಲಿ ನಟಿಸಿದ್ದರು. ಟಾಪ್ 7 ಆದರೂ ಫೈನಲ್ಗೆ ಬರಲಿಲ್ಲ. ಆ ಒಂದು ಕಾರ್ಯಕ್ರಮದಲ್ಲಿ ತಂದೆಗೆ ವಿಡಿಯೋ ಕಾಲ್ ಮಾಡಿ ಕ್ಷಮಿಸಿ ಅಪ್ಪಾ ಎಂದು ಕಣ್ಣೀರಿಟ್ಟಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಪ್ರಿಯಾಂಕಾ ಯೂಟ್ಯೂಬ್, ಇನ್ಸ್ಟಾದಲ್ಲಿ ವಿಡಿಯೋ ಹಾಕುತ್ತಲೇ ಇರುತ್ತಾರೆ. ಈ ಮೂಲಕ ನಟಿ ಹೆಚ್ಚಿನ ವ್ಯೂಸ್ ಗಳಿಸುತ್ತಾರೆ.