Monday, June 15, 2026
spot_imgspot_img
spot_imgspot_img

ರೈಲ್ವೇ ಹಳಿಯ ಪಕ್ಕ ಕೋಮಾಸ್ಥಿತಿಯಲ್ಲಿ ಬಿದ್ದಿದ್ದ ಯುವಕನ ಪ್ರಾಣ ಉಳಿಸಿದ ಆಂಬ್ಯುಲೆನ್ಸ್ ಸಿಬ್ಬಂದಿ

- Advertisement -
- Advertisement -

ಕೋಮಾಸ್ಥಿತಿಯಲ್ಲಿ ಬಿದ್ದಿದ್ದ ಯುವಕನೊಬ್ಬನನ್ನು ಆಂಬ್ಯುಲೆನ್ಸ್ ಸಿಬ್ಬಂದಿಗಳು ಪ್ರಾಣ ಉಳಿಸಿರುವ ಘಟನೆ ಬೈಂದೂರು ಶಿರೂರು ನೆರೆಗುದ್ದೆ ರೈಲ್ವೆ ಸುರಂಗ ಮಾರ್ಗದಲ್ಲಿ ನಡೆದಿದೆ.

ಗಾಯಾಳು ರಾಜೇಶ್ ಎಂದು ಗುರುತಿಸಲಾಗಿದೆ. ರೈಲ್ವೆ ಇಲಾಖೆ ನೀಡಿದ ಮಾಹಿತಿಯ ಮೇರೆಗೆ ಆರೋಗ್ಯ ಕವಚ 108 ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ರೈಲ್ವೇ ಸುರಂಗ ಮಾರ್ಗದೊಳಗೆ ಸುಮಾರು 3ಕಿ.ಮೀ ನಡೆದು ಕೊಂಡು ಹೋಗಿ ಹಳಿಯ ಪಕ್ಕದಲ್ಲಿ ಬಿದ್ದ ವ್ಯಕ್ತಿಯನ್ನು ಸ್ಟ್ರೆಚ್ಚರ್ ನಲ್ಲಿ ತಂದು ಸಿಎಸ್ಸಿ ಬೈಂದೂರ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಪ್ರಥಮ ಚಿಕಿತ್ಸೆ ನೀಡಿ ಬಳಿಕ ಸರ್ಕಾರಿ ಆಸ್ಪತ್ರೆ ಕುಂದಾಪುರ ದಾಖಲು ಮಾಡಿದ್ದಾರೆ‌.

- Advertisement -

Related news

error: Content is protected !!