Monday, April 29, 2024
spot_imgspot_img
spot_imgspot_img

ಆರು ದಿನದ ನವಜಾತ ಶಿಶು ಕಳ್ಳತನ; ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ತಾಯಿ ಮಡಿಲು ಸೇರಿದ ಮಗು..!!

- Advertisement -G L Acharya panikkar
- Advertisement -

ಆರು ದಿನದ ನವಜಾತ ಗಂಡು ಶಿಶುವನ್ನು ಕಳವಾದ ಘಟನೆ ಕೋಲಾರ ನಗರದ ಎಸ್ ಎನ್ ಆರ್ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ತಮಿಳುನಾಡಿನಲ್ಲಿ ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸಿ, ಶಿಶುವನ್ನು ಮರಳಿ ತಾಯಿಯ ಮಡಿಲು ಸೇರಿಸಿದ್ದಾರೆ.

ಮಾಲೂರಿನ ಪಾಟಿಲ್‌ ಬೀದಿಯ ನಂದಿನಿ ಅವರ ಕೋಲಾರ ಜಿಲ್ಲಾಸ್ಪತ್ರೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇವರು ಶೌಚಾಲಯಕ್ಕೆ ತೆರಳಿ ವಾಪಸ್ಸಾಗುವ ವೇಳೆ ಇವರ ಆರು ದಿನದ ಗಂಡು ಮಗು ನಾಪತ್ತೆಯಾಗಿತ್ತು. ಸಿಸಿಟಿವಿ ಪರಿಶೀಲನೆ ಮಾಡಿದಾಗ ಮಾಸ್ಕ್‌ ಧರಿಸಿದ ಮೂವರು ಮಹಿಳೆಯರು ಬ್ಯಾಗ್ ನಲ್ಲಿ‌ ಮಗುವನ್ನು ಕದ್ದೋಯ್ಯಿರುವ ಶಂಕೆ ವ್ಯಕ್ತವಾಗಿತ್ತು. ಕೂಡಲೇ ಸುದ್ದಿ ತಿಳಿದು ಕಳ್ಳರ ಜಾಡು ಹಿಡಿದಿದ್ದ ಪೊಲೀಸರು, ಮಗುವನ್ನು ದುಷ್ಕರ್ಮಿಗಳಿಂದ‌ ರಕ್ಷಣೆ ಮಾಡಿದ್ದಾರೆ.

ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಕೋಲಾರ ಹಾಗೂ ತಮಿಳುನಾಡಿನ ಗಡಿಭಾಗದ ಬೇರಿಕೆ ಬಳಿ ಪೊಲೀಸರು ಮಗುವಿನ ರಕ್ಷಣೆ ಮಾಡಿದ್ದಾರೆ. ಮಗುವನ್ನು ಕಳ್ಳತನ ಮಾಡಿ ತಮಿಳುನಾಡಿಗೆ ಸಾಗಿಸಲಾಗುತ್ತಿತ್ತು. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಅನಾಹುತ ತಪ್ಪಿದ್ದು, ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಮಗು ಕಳವು ಮಾಡಿದವರ ಪೈಕಿ ಒಬ್ಬ ಮಹಿಳೆಯನ್ನು ಬಂಧಿಸಲಾಗಿದೆ. ಉಳಿದವರಿಗಾಗಿ ಹುಡುಕಾಟ ನಡೆದಿದೆ. ಆರು ದಿನಗಳ ಶಿಶು ಮರಳಿ ತಾಯಿಯ ಮಡಿಲು ಸೇರಿದ್ದು, ಮಗುವನ್ನು ಬಿಗಿದಪ್ಪಿ ತಾಯಿ ಕಣ್ಣೀರಿಟ್ಟ ದೃಶ್ಯ ವೈರಲ್‌ ಆಗಿದೆ. ಕೋಲಾರ ಮಹಿಳಾ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!