Saturday, May 18, 2024
spot_imgspot_img
spot_imgspot_img

ಹಳೇ ಪೇಪರ್‌ ಮಾರಲು ಹೋದ ಯುವಕನಿಂದ ಗುಜರಿ ಅಂಗಡಿ ಮೇಲೆ ಎಫ್​ಐಆರ್..! ಕಾರಣವೇನು ಗೊತ್ತಾ?

- Advertisement -G L Acharya panikkar
- Advertisement -

ಖರ್ಚಿಗೆ ಹಣವಿಲ್ಲ ಎಂದು ಪೇಪರ್ ಮಾರಲು ಹೋದ ಯುವಕ ಗುಜರಿ ಅಂಗಡಿ ಮೇಲೆಯೇ ಎಫ್​ಐಆರ್ ದಾಖಲಿಸಿದ ಘಟನೆ ನಡೆದಿದೆ. ನ್ಯೂಸ್ ಪೇಪರ್ ಮಾರಲು ಹೋಗಿದ್ದ ಜೀವನ್ ಪ್ರಸಾದ್ ಎಂಬ ಯುವಕನಿಗೆ ಗುಜರಿ ಅಂಗಡಿಯಿಂದ ಮೋಸ ಆಗಿದ್ದು ಯುವಕ ಎಫ್​ಐಆರ್ ದಾಖಲಿಸಿದ್ದಾನೆ.

ಬೆಂಗಳೂರಿನ ನಾಗೇಂದ್ರ ಬ್ಲಾಕ್ ಬಳಿ ಇರುವ ಮಾರಮ್ಮ ಪೇಪರ್ ಮಾರ್ಟ್​ಗೆ ಜೀವನ್ 8 ಕೆಜಿ ಪೇಪರ್ ಕೊಂಡೊಯ್ದಿದ್ದ. 1 ಕೆಜಿಗೆ 16 ರೂಪಾಯಿ ತೂಗುತ್ತೆ. ಪೇಪರ್ ಸ್ಕೇಲ್​ನಲ್ಲಿ 8‌ ಕೆಜಿಯಷ್ಟು ಪೇಪರ್ ಕೇವಲ 6 ಕೆ.ಜಿ 900 ಗ್ರಾಂ ಎಂದು ತೋರಿಸಿದೆ. ಅದೇ ಬಂಡಲನ್ನು ಮನೆಯ ಬಳಿಯ ಅಂಗಡಿಯೊಂದರಲ್ಲಿ ತೂಕ ಮಾಡಿದಾಗ 8‌ ಕೆ.ಜಿ 700 ಗ್ರಾಂ ಇತ್ತು. ಬಳಿಕ ಜೀವನ್​ಗೆ ಇಲ್ಲಿ ಮೋಸ ಆಗುತ್ತಿರುವುದು ಗೊತ್ತಾಗಿದೆ.

ಬಳಿಕ ಮಾರಮ್ಮ ಪೇಪರ್ ಮಾರ್ಟ್​ಗೆ ಹೋದ ಜೀವನ್ ಮತ್ತೆ ತೂಕ ಮಾಡಿಸಿದ್ದಾರೆ. ಆಗ ಅಲ್ಲಿ ಕೆಳ ಭಾಗದಲ್ಲಿ ಮಾತ್ರ ತೂಕ ಮೇಲ್ಭಾಗದಲ್ಲಿ 6ಕೆ.ಜಿ 900 ಗ್ರಾಂ ಬರುತ್ತಿತ್ತು. ಇದನ್ನ ಪ್ರಶ್ನಿಸಿದಕ್ಕೆ, ಇಷ್ಟವಿದ್ದರೆ ಮಾರು ಇಲ್ಲ ಈ ವಿಚಾರ ಯಾರಿಗೂ ಹೇಳಬೇಡ, ಹೇಳಿದರೆ ಗ್ರಹಚಾರ ನೆಟ್ಟಗಿರುವುದಿಲ್ಲ ಎಂದು ಗುಜರಿ ಅಂಗಡಿಯಲ್ಲಿದ್ದವ ಬೆದರಿಕೆ ಹಾಕಿದ್ದಾನೆ.

ಈ ಹಿನ್ನಲೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಜೀವನ್ ದೂರು ದಾಖಲಿಸಿದ್ದಾರೆ. ದೂರಿನನ್ವಯ Legal metrology act ನಡಿ ಗಿರಿನಗರ ಪೊಲೀಸರು ಕೇಸ್ ದಾಖಲಿಸಿದ್ದಾರೆ.

- Advertisement -

Related news

error: Content is protected !!